ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

ಡಿಸೆಂಬರ್ 7, 2012

ವಿಳಾಸವಿಲ್ಲದ – ಪ್ರೀತಿ

Filed under: ಅರಿಯದೇ ಬಂದದ್ದು — kavya gowda @ 4:34 ಅಪರಾಹ್ನ
Tags:
 
ಒಂದಲ್ಲ ಎರಡಲ್ಲ
ಲೆಕ್ಕವಿಲ್ಲದಷ್ಟು ಪತ್ರಗಳ
ಬರೆದದ್ದು
ವಿಪರ್ಯಾಸವೆಂದರೆ
ಕಳಿಸಲು ನಿನ್ನ
ವಿಳಾಸವಿಲ್ಲದ್ದು…
ಓದಬೇಕಿತ್ತು ನೀನೊಮ್ಮೆ
ಅವುಗಳನು
ಅರಿಯಬಹುದಿತ್ತೇನೋ
ನನ್ನ ನಿಷ್ಕಲ್ಮಶವಾದ
ಪ್ರೀತಿಯನ್ನು.
ಬೇಸರವಿಲ್ಲ ನೀ
ಓದಲಿಲ್ಲವೆಂದು
ಭರವಸೆಯು ನನಗಿರಲಿಲ್ಲ
ನೀ ಅರಿಯುವೆಯೆಂದು,
ಆದರೂ ನಿರೀಕ್ಷೆಯಿತ್ತು
ಒಂದಹನಿಯ ಕಣ್ಣೀರು.
”ಎಲ್ಲಿರುವೆ ? ಹೇಗಿರುವೆ ?
ಎಂಬುದಿರಲಿಲ್ಲ
ಕನಸಿತ್ತು, ನಗುವಿತ್ತು
ನಿನ್ನೊಂದಿಗಿನ ಮುಂದಿನ
ಕ್ಷಣವಿತ್ತು , ನಾಳೆಯಿತ್ತು.”
ನಾ ಕಳಿಸಲಾರೆ, ನೀ ಓದಲಾರೆ
ಹರಿದುಬಿಡಲೇ ,,?-
ನನಸಾಗದ ಈ ಕನಸುಗಳ
ಪತ್ರಗಳನ್ನ ,
ಮರೆತುಬಿಡಲೇ
ವಿಳಾಸವಿಲ್ಲದ ನನ್ನೊಳಗಿನ
”ನಿನ್ನ- ಪ್ರೀತಿಯನ್ನ ”.

3 ಟಿಪ್ಪಣಿಗಳು »

  1. super

    ಪ್ರತಿಕ್ರಿಯೆ by ಅನಾಮಿಕ — ಏಪ್ರಿಲ್ 13, 2014 @ 11:16 ಫೂರ್ವಾಹ್ನ | ಉತ್ತರ

  2. nice i like

    ಪ್ರತಿಕ್ರಿಯೆ by ಅನಾಮಿಕ — ಫೆಬ್ರವರಿ 19, 2015 @ 6:03 ಫೂರ್ವಾಹ್ನ | ಉತ್ತರ

  3. ಚಂದ

    ಪ್ರತಿಕ್ರಿಯೆ by ಅನಾಮಿಕ — ಜುಲೈ 21, 2017 @ 10:55 ಫೂರ್ವಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.