ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

ಡಿಸೆಂಬರ್ 7, 2012

ವಿಳಾಸವಿಲ್ಲದ – ಪ್ರೀತಿ

Filed under: ಅರಿಯದೇ ಬಂದದ್ದು — kavya gowda @ 4:34 ಅಪರಾಹ್ನ
Tags:
 
ಒಂದಲ್ಲ ಎರಡಲ್ಲ
ಲೆಕ್ಕವಿಲ್ಲದಷ್ಟು ಪತ್ರಗಳ
ಬರೆದದ್ದು
ವಿಪರ್ಯಾಸವೆಂದರೆ
ಕಳಿಸಲು ನಿನ್ನ
ವಿಳಾಸವಿಲ್ಲದ್ದು…
ಓದಬೇಕಿತ್ತು ನೀನೊಮ್ಮೆ
ಅವುಗಳನು
ಅರಿಯಬಹುದಿತ್ತೇನೋ
ನನ್ನ ನಿಷ್ಕಲ್ಮಶವಾದ
ಪ್ರೀತಿಯನ್ನು.
ಬೇಸರವಿಲ್ಲ ನೀ
ಓದಲಿಲ್ಲವೆಂದು
ಭರವಸೆಯು ನನಗಿರಲಿಲ್ಲ
ನೀ ಅರಿಯುವೆಯೆಂದು,
ಆದರೂ ನಿರೀಕ್ಷೆಯಿತ್ತು
ಒಂದಹನಿಯ ಕಣ್ಣೀರು.
”ಎಲ್ಲಿರುವೆ ? ಹೇಗಿರುವೆ ?
ಎಂಬುದಿರಲಿಲ್ಲ
ಕನಸಿತ್ತು, ನಗುವಿತ್ತು
ನಿನ್ನೊಂದಿಗಿನ ಮುಂದಿನ
ಕ್ಷಣವಿತ್ತು , ನಾಳೆಯಿತ್ತು.”
ನಾ ಕಳಿಸಲಾರೆ, ನೀ ಓದಲಾರೆ
ಹರಿದುಬಿಡಲೇ ,,?-
ನನಸಾಗದ ಈ ಕನಸುಗಳ
ಪತ್ರಗಳನ್ನ ,
ಮರೆತುಬಿಡಲೇ
ವಿಳಾಸವಿಲ್ಲದ ನನ್ನೊಳಗಿನ
”ನಿನ್ನ- ಪ್ರೀತಿಯನ್ನ ”.

ಡಿಸೆಂಬರ್ 1, 2012

ನೆನಪು

Filed under: ಅರಿಯದೇ ಬಂದದ್ದು — kavya gowda @ 6:07 ಅಪರಾಹ್ನ
Tags:

ಹುಚ್ಚನಂತೆ ಪ್ರೀತಿಸಿದವನ
ಪ್ರೀತಿಗೆ ಮೋಸ ಮಾಡಿ
ಹೋದವಳ ಕೆಲವು ದಿನದ
ನಿಜವಾದ ಪ್ರೀತಿಯ
ನೆನಪು ಮರೆಯದಿರುವುದೇ ..!!?

”ಆಲಿಸ ಬೇಕೆನಿಸುತಿದೆ ನಿನ್ನ
ಹೃದಯದ ಬಡಿತವ,
ಕೇಳಬೇಕೆನಿಸುತಿದೆ ಒಂದುಸಲ
ನನ್ನೆಸರ ನಿನ್ನ ದ್ವನಿಯಲೀ….,
ನೋಡಬೇಕೆನಿಸಿದೆ ನನಗಾಗಿ
ಹುಡುಕುತಿದ್ದ ನಿನ್ನ ಕಣ್ಣುಗಳ,
ಬಯಸುತಿದೆ ಮನಸು ನಿನ್ನ
ಮರೆಯಲಾಗದ ಅಪ್ಪುಗೆಯ…
ಹೇಗೆ ಹೇಳಲಿ ನಿನಗೆ
ವಂಚಿಸಿ ಹೋದವಳು ನಾನು.

ನನ್ನ ನಿಟ್ಟುಸಿರು
ಗಾಳಿಯಲಿ ತೇಲಿಬಂದು
ನಿನ್ನ ಮುಂಗುರುಳ ಸರಿಸಿ
ಒಂದು ಕ್ಷಣ ನನ್ನ ನೆನಪಿಸಬಾರದೇ..?

”ತಪ್ಪು ನನ್ನದೇ , ಕ್ಷಮೆ ಇಲ್ಲದ್ದು.
ನೋವು ನನಗೆ
ಮರಳಿ ನಿನ್ನಲ್ಲಿ ಬರಲಾಗದ್ದು.
ಕೊನೆಯಿಲ್ಲ ಇದಕ್ಕೆ , ಪರಿಸ್ತಿತಿ ವಿಧಿಯದ್ದು”.
ಇಷ್ಟವಿಲ್ಲದ ಜೀವನಕೆ
ಕೊನೆಯೆಂಬ ನಿದ್ರೆಯು
ಬರುವವರೆಗೆ ಕಾಯಬೇಕಿದೆ
ನಿನ್ನ ನೆನಪಿನಲೇ.

ಜೂನ್ 25, 2011

ಕೇಳದ ಮನಸು

Filed under: ಅರಿಯದೇ ಬಂದದ್ದು — kavya gowda @ 10:01 ಫೂರ್ವಾಹ್ನ

ಹಣೆಬರಹದಲಿ ‘ಅವನ’
ನನಗಾಗಿ ಬರೆದಿಲ್ಲ,
ತಿಳಿದ ವಿಷಯಕೆ
ಏಕೆ ಈ ಹುಚ್ಚಾಟ!!!!!
ಅಳುತಿರುವೆ ಅವನ
ಮೋಸವಿಲ್ಲದ ಪ್ರೀತಿಗಾಗಿ-
ಉಸಿರುಗಟ್ಟಿಸುತಿದೆ ಅವನಿಲ್ಲದ
ಪ್ರತಿ ಕ್ಷಣಾಕ್ಷಣವೂ-
ಮರುಕಳಿಸುತಿವೆ ಅವನಾಡಿದ
ಒಂದೊಂದೂ ಮಾತು,
ಬಯಸುತಿದೆ ದುಃಖಗಳಿಗೆ
ಅವನ ಸಮಾದನದ ಸಾಂತ್ವನ,
ಬೇಕೆನಿಸಿದೆ ಅವನೊಡನೆ
ಓಡಾಡಿದ ಒಡನಾಟ
ಪ್ರಯತ್ನೀಸಿಯೂ ಮರೆಯಲಾಗಲಿಲ್ಲ
ನನ್ನ ಅಳುವಿಗೆ
ಸ್ಪಂಧಿಸಿದ ಆ ಕಣ್ಣುಗಳಾ,
ಕಣ್ಣೀರಾ ಒರೆಸಿದ
ಮೃದುವಾದ ಆ ಕೈಗಳ,
ಆಸರೆಯಾಗಿ ಧೈರ್ಯ
ಹೇಳಿದ ಆ ಬುಜಗಳ,
ಸದಾ ನನ್ನೊಡನೆಯಿರುವ
ಭರವಸೆಯ ಅಪ್ಪುಗೆಯ,
ಪ್ರೀತಿಯ ಚುಂಭನವಾ
ಅವನಿತ್ತ ನಂಬಿಕೆಯ ಬಾಷೆಗಳ,,,,
ಹೇಗೆ ಮರೆಯಲಿ ????
ನೆರಳಂತೆ ಹಿಂಬಾಲಿಸುತಿರುವ
ನೆನಪುಗ ಜೊತೆಯಲಿ
ಕೇಳದ ಮನಸು
ಕಾಣುತಿದೆ ಕನಸ
ಅವನ ಬರುವಿಗಾಗಿ…….

ಡಿಸೆಂಬರ್ 11, 2010

ಮನದಾಳದ ನೋವು

Filed under: ಅರಿಯದೇ ಬಂದದ್ದು — kavya gowda @ 10:32 ಫೂರ್ವಾಹ್ನ

ಏಷ್ಟೋ ಹಾಳೆಗಳ ಮೇಲೆ
ಪದಗಳು ಸೇರಿ ನರ್ತನ
ಮಾಡಿ ಅರಳಿರಿವುದೊಂದು ಕತೆ,
ಆದ ಕೂಡಿಸಿ ಓದುವೆಯಾದರೆ
ನಾಯಕ ನೀನಾಗಿರುವೆ
ಕಳನಾಯಕಿ ನಾನಾಗಿರುವೆ
ನಿನ್ನ ಯೋಚನೆಗೆ.
ನಿನಗೆ ಸಂತಸವಿಲ್ಲ
ಎನಗೆ ಬೇಸರ ತಪ್ಪಿದಲ್ಲ
ತಪ್ಪುಗಳು ಇಬ್ಬರಲಿದ್ದರೂ
ನಾ ಹೇಳಿದ್ದು ನಿನಗೆ ಬೇಡ
ನೀ ಹೇಳುವುದು ನನಗೂ ಬೇಡ.
‘ಪ್ರೀತಿ’ ಇಬ್ಬರಲೂ
ತುಳುಕಿ ತೂರಾಡಿದೆಯಾದರೂ
ಸನಿಹ ಇಬ್ಬರಿಗೂ ಬೇಡವಾಗಿದೆ.
ನನ್ನ ಮಾತು ನಿನಗೆ ಹಿಡಿಸದು
ನಿನ್ನ ಮಾತು ನನಗೂ ಹಿಡಿಸದು
ಆದರೂ ನಿಲ್ಲದ್ದು ವಾದ
ನಾ ಸೋಲಲಾರೆ
ನೀ ಸೋಲಬಯಸಲಾರೆ
ಕೊನೆಗೆ ತುಕ್ಕು ಹಿಡಿದದ್ದು
ಒಂದಾಗಬೇಕಾದ ಸಂಬಂಧ.
ನೀನು ಪ್ರೀತಿಸಿದ್ದೆ
ನಾನು ಪ್ರೀತಿಸಿರುವೆ
ಎಲ್ಲರೂ ಒಪ್ಪಿದ್ದು
ಆದರೂ ಒಂದಾಗಲಾಗದ್ದು
ವಿಪರ್ಯಾಸವಾದರೂ
ಬ್ರಹ್ಮ ಗೀಚಿದ್ದು
ದೇವರು ಬಯಸಿದ್ದು.
ಇದ ನೀ ಒಪ್ಪಲಾರೆ
ನಾನು ಒಪ್ಪಿಕೊಳ್ಳಲಾರೆ
ಆದರೆ ಎಲ್ಲಿಯವರೆಗೆ
ಸಮಯ ನಿಲ್ಲುವುದೇ,
ನಾನು ನೀನು ಅಲ್ಲ
ನನ್ನದು ನಿನ್ನದೂ ಆಗಲಿಲ್ಲ
ನಾನೊಂದು ತೀರ
ನೀನೊಂದು ತೀರ
ಇಬ್ಬರದೂ ವಿರಹಾ
ಆದರೂ ಜೀವನವೊಂದು
ನಿಲ್ಲದ ಪ್ರಯಾಣ.

ನವೆಂಬರ್ 22, 2010

ಸುಮ್ಮನೇ……ಹುಡುಕುತ್ತಾ

Filed under: ಅರಿಯದೇ ಬಂದದ್ದು — kavya gowda @ 9:54 ಫೂರ್ವಾಹ್ನ

ತಣ್ಣನೆಯ ಗಾಳಿಯಲಿ
ತುಂತುರು ಮಳೆ
ಹಕ್ಕಿಗಳ ಚಿಲಿಪಿಲಿ
ಗಾಢವಾದ ರಾತ್ರಿಯೊಂದು
ಕಳೆದು ಹೊಸತೊಂದು
ದಿನದ ಆರಂಭದಲಿ
ಬಾರವಾದ ಮನಸು
ಹಗುರವಾದಂತೆನಿಸಿರಲು
ಬೆಚ್ಚನೆಯ ಸ್ಪರ್ಶವೊಂದು
ಮೈತಾಗಿ ಕಣ್ತೆರೆದರೆ
ಎದುರಿನಲಿ ನೀನು…
ಬೆಚ್ಚಿ ಎದ್ದವಳಾ
ತನ್ನ ಹೆಗಲಾಸರೆ
ನೀಡಿ ಎದೆಗೊರಗಿಸಿಕೊಂಡಿರಲು
ನಿನ್ನೆಯ ಬೇಸರವ ನೆನೆದು
ಕಣ್ಣಂಚಿನಲಿ ಜಾರಿದ ನೀರ
ನೋಡಿ ನಿನ್ನ ಕಣ್ಣಲೂ
ಮೂಡಿದ ನೀರು
ನನ್ನ ಕೆನ್ನೆಯ
ಮೇಲೆ ಜಾರಿ ಬಿದ್ದಿರಲು
ಬಿಕ್ಕಿ ಬಿಕ್ಕಿ ಅತ್ತವಳಾ
ಹಣೆಯ ಮೇಲೊಂದು
ಪ್ರೀತಿಯ ಮುತ್ತನಿತ್ತು
ಕ್ಷಮೆಯಾಚಿಸಿ ಎಲ್ಲಿ

ಮರೆಯಾಗಿ ಹೊದೆಯೊ

ನನ್ನ ನಲ್ಲ.

ಆಗಷ್ಟ್ 18, 2009

ಕಲ್ಪನೆ

Filed under: ಅರಿಯದೇ ಬಂದದ್ದು — kavya gowda @ 11:05 ಫೂರ್ವಾಹ್ನ
Tags:

ಹಕ್ಕಿಯಂತೆ ಹಾರುತಿರುವೆ
ಮೇಲಕ್ಕಲ್ಲ ಕೆಳಕ್ಕೆ
ಕತ್ತಲು ಆವರಿಸಿರುವುದಾದರೂ
ಅರಿವಾಗುತಿದೆ
ಪಾತಾಳದೊಳಗೆ ಬೀಳುವಿಕೆ.
ಮೇಲೆ ಮೇಲೆ ಹಾರುವ
ಪ್ರಯತ್ನ ನನ್ನದಾದರೂ
ಸಾಧ್ಯವಾಗದ
ಅಸಹಾಯಕತೆ.
ಕೂಗಿದ್ದೂ ಉಂಟು
ಆದರದು ಕೇಳಿಸಿದ್ದು
ಯಾರಿಗಿಲ್ಲ,ಬದಲಿಗೆ
ಪ್ರತಿಧ್ವನಿಯಾಗಿ
ಅಪ್ಪಳಿಸಿದ್ದು ನನ್ನ ಕಿವಿಗೆ.
ನಿಲ್ಲಲು ನೆಲೆ ಬೇಕಿತ್ತು
ಹುಡುಕಾಟದಲಿ ಸಿಗದೆ
ಮನಸ್ಸಿಗಾದದ್ದು ನಿರಾಸೆ
ಆದರೂ, ಬಿಡದ ಆಶಾವಾದಿತ್ವ
ಕೊನೆಯಿಲ್ಲದ ಮೊದಲಿಲ್ಲ
ಸಿಕ್ಕೇ ಸಿಕ್ಕಿತೆಂಬ ಛಲ.
ಬೇಕಾಗಿದ್ದು ಗಟ್ಟಿ ಹೃದಯ
ಜೊತೆಗಿದ್ದದ್ದು ಧೈರ್ಯ
ಆದರೂ, ಕಣ್ಣಲ್ಲಿದ್ದದ್ದು ನೀರು
ಯಾರಿಗೆ ಕಾಣಿಸೀತು
ಕೆನ್ನೆಗಳ ಮೇಲಿಂದ ಜಾರಿ
ಎಲ್ಲೋ ಬಿದ್ದು ಮರೆಯಾಗಿತ್ತು.
ಹಸಿದ ಹೊಟ್ಟೆಯಾದರೂ
ಕೋಪಕ್ಕೇನೂ ಕಮ್ಮಿಯಿಲ್ಲ
ಕೂಗಾಡಿಬಿಡಬೇಕು
ಕೇಳಲು ಯಾರಿರುವರಲ್ಲಿ
ಉಸಿರಿಗೂ ಮೌನ
ಜೊತೆಗಾರರಿಲ್ಲದ ಒಂಟಿ.
ಎಲ್ಲೂ ನಿಲ್ಲದೇ

ಕೊನೆಯನೂ ತಿಳಿಯದೆ

ಸಾಗುತಿದೆ ಪಯಣ.

ಕ್ಷಣದಲೇ

ಮರಳುಗಾಡಿನಲಿ ಸಿಕ್ಕ
ಗುಟುಕು ನೀರಿನ ಅನುಭವ
ಏನೋ ಸಂತಸ
ಹೊಸತೊಂದು ಅನುಭವ
ಎಂದೂ ಮರೆಯಲಾಗದ ಸ್ಪರ್ಶ
ಕೊನೆಯವರೆಗೂ
ಜೊತೆಗಿರುವೆನೆಂಬ ಭರವಸೆ
ಮನಸು ಕುಣಿದು ಕುಪ್ಪಳಿಸಿತ್ತು
ಮುಚ್ಚಿದ ಕಣ್ಣು ತೆರೆದೆ
ಎದುರಲ್ಲಿ ನೀನು
ಪ್ರಶ್ನೆಯ ಗೆರೆಗಳಿಂದ
ತುಂಬಿರುವ ನಿನ್ನ ಮುಖ
ನೆನಪಿಸಿದ್ದು
ನಾ ಕಂಡ ಕಲ್ಪನೆಯ
ಲೋಕವನ್ನ.

ಆಗಷ್ಟ್ 8, 2009

ಪ್ರಶ್ನೆಯಾದ ಮೌನ

Filed under: ಅರಿಯದೇ ಬಂದದ್ದು — kavya gowda @ 9:26 ಫೂರ್ವಾಹ್ನ

ಪದೇ ಪದೇ ನೆನಪಾಗುತಿದೆ
ನನ್ನ ಆ ದಿನದ ಮೌನ…
ಘಾಡವಾದ ಪ್ರೀತಿ ನನದು
ಯಾವ ಕಲ್ಮಶವೂ ಇರಲಿಲ್ಲ.
ನನ್ನಷ್ಟೇ ನನ್ನ ಪ್ರೀತಿಯಲ್ಲೂ
ಇದ್ದದ್ದು ನಂಬಿಕೆ.
ಧೈರ್ಯ, ದೃಢ ನಿರ್ಧಾರ,
ಕಲ್ಪನೆ, ಕನಸು, ಭರವಸೆ
ಎಲ್ಲಾ ಇತ್ತು ನನ್ನ ಪ್ರೀತಿಯಲ್ಲಿ
ಆದರೇಕೆ
ಆ ದಿನ ನಾ ಮೌನವಾಗಿದ್ದು?
ನೀನಂದು ಆತುರದಲಿ ಬಂದು
ನಿನ್ನ ಮರೆತುಬಿಡೆಂದಾಗ,
ಪ್ರೀತಿಸಿದ ಪ್ರೀತಿಯನು
ದೂರಮಾಡಿ ವಂಚಿಸಿದಾಗ
ನಾನೇಕೆ ಮೌನವಾದೆ !
ತಡೆಯಬಹುದಿತ್ತು
ಅತ್ತು ಕರೆಯಬಹುದಿತ್ತು
ವಿರೋಧ ವ್ಯಕ್ತ ಪಡಿಸಬಹುದಿತ್ತು
ಆದರೇಕೆ ಬರೀ ನಿಟ್ಟುಸಿರಿನೊಂದಿಗೆ
ನಾ ಮೌನವಾದೆ ?
ಉತ್ತರ ಸಿಗುತಿಲ್ಲ
ಪ್ರಶ್ನೆ ಮರೆಯುತಿಲ್ಲ
ಉತ್ತರ ಸಿಗದ ಈ ಪ್ರಶ್ನೆಯ
ನೆನಪಿನಲಿ
ಪದೇ ಪದೇ ನೆನಪಾಗುತಿದೆ
ನನ್ನ ಆ ದಿನದ ಮೌನ.

ಜೂನ್ 10, 2009

ಪ್ರೀತಿಸಿದವನು ದೂರಾಗಿರಲು (ನೋವು -ದುಃಖ)

Filed under: ಅರಿಯದೇ ಬಂದದ್ದು — kavya gowda @ 10:01 ಫೂರ್ವಾಹ್ನ

ಬದುಕು ಬೇಸರ ,ಜೀವನ ಕಷ್ಟ
ನೋವಾಗಿದ್ದು ಹೃದಯಕ್ಕೆ
ಸಂಕಟವಾಗಿರುವುದು ಮನಸ್ಸಿಗೆ.
ಮಾತು ಮೌನವಾಗಿರುವುದು
ಚಿಂತೆ ಬೇಡದಿರುವುದು
ಯಾತನೆ ಬೇಸರ ಅವನಿಗಿಲ್ಲ
ಅರ್ಥವಿಲ್ಲದೇ ನಾ ಪಡುತಿರುವೆ.
ಪ್ರೀತಿ ಅಮರ ಸತ್ಯ
ಆದರದು ನನಗಲ್ಲ,
ಅವನನ್ನೇ ಪ್ರೀತಿಸಿದ್ದು
ವಿಪರ್ಯಾಸ ಅವನು ಸಿಗದೆ
ಬೇರೆಯವರವಾನಾಗಿದ್ದು.
ಹುಡುಕಾಟ ನನ್ನದು
ಸಿಕ್ಕಿದ್ದು ಅವನಲ್ಲ ,
ಹಣೆಬರಹ ಬ್ರಹ್ಮನದು
ಅದರಲ್ಲಿ ಅವನ ಹೆಸರಿಲ್ಲ
ಹೋದ ಜನುಮದ ಋಣ
ಈ ಜನ್ಮದ ನಮ್ಮಿಬ್ಬರ ಮಿಲನ.
ಅವನಿಗಾಗಿ ನಾನು
ಹೇಳಲಿಲ್ಲ ಅವನೆಂದೂ
ಕಟ್ಟಿಕೊಂಡೆ ಕನಸುಗಳ
ಬಿಟ್ಟು ಹೋಗಿರುವ ನೆನಪುಗಳ
ಮೋಸ ಅವ ಮಾಡಿದ್ದಲ್ಲ
ನಾ ಹೋಗಿದ್ದು.
ಬದುಕುವ ಮನಸಿಲ್ಲ
ಸಾವು ಬರುತಿಲ್ಲ ಸನಿಹ
ಜೀವನ ಸಾಕಾಗಿದೆ
ಅಂತ್ಯ ನನ್ನಲಿಲ್ಲ.
ಮಾಡಿರುವೆನೇನೋ ಪಾಪ
ಪದುತಿರುವುದದಕೆ ಪ್ರಾಯಶ್ಚಿತ
ಕಾಯುತಿರುವೆ ಕೊನೆಯ ಉಸಿರಿಗೆ
ಸಿಗದೆ ಆಗುತಿದೆ ನೋವು ವ್ಯಥೆ.

ಜೂನ್ 2, 2009

ನಾನೆಂಬ ಮೂರ್ಖ

Filed under: ಅರಿಯದೇ ಬಂದದ್ದು — kavya gowda @ 7:18 ಫೂರ್ವಾಹ್ನ

ನಾನು ನನದಲ್ಲ

ನನದು ಏನಿಲ್ಲ

ನಾನು ನಾನೆಂಬುವ

ಹುಡುಕಾಟದಲಿ ಅರಿಯುವುದು

ನಾನೆಂಬುದೊಂದು

ಇನ್ನೊಂದರಿಂದ,

ಇನ್ನೊಂದಿಲ್ಲದೇ ನಾನಿಲ್ಲವೆಂದು.

ಹಣತೆ ಇಲ್ಲದೇ ಬೆಳಕಿಲ್ಲ

ಎಣ್ಣೆ ಇರದ ಹಣತೆ ಇಲ್ಲ

ಹಣತೆ , ಎಣ್ಣೆ ಇದ್ದರೆ ಏನಂತೆ

ಬತ್ತಿ ಇಲ್ಲದೇ ಬೆಳಕು

ಮೂಡುವುದೇ ಇಲ್ಲ.

ಗಿಡವಾಗದು ಮೊಳಕೆ

ನೆಲವಿಲ್ಲದೇ,,,

ಮರವಾಗದು ಗಿಡ

ಮಳೆಯಿಲ್ಲದೆ ,ನೀರಿಲ್ಲದೇ.

ಎಲ್ಲಿಂದ ಎಲ್ಲಿಗೋ

ಯಾರಿಂದ ಎಲ್ಲಿಗೋ

ಎಲ್ಲಿಂದ ಯಾರಿಗೋ

ಹುಡುಕ ಹೊರಟರೆ

ಯಾವುದರಿಂದಲೋ

ಯಾವುದಕ್ಕೋ ಒಂದು

ಬಿಡಿಸಲಾರದ ನಂಟು.

ಹುಟ್ಟು ನನದಲ್ಲ

ಸಾವು ನನದಲ್ಲ 

ಗಾಳಿಯಿಲ್ಲದೇ ಉಸಿರಿಲ್ಲ

ಉಸಿರಿಲ್ಲದ ಜೀವವಿಲ್ಲ,

ಎಲ್ಲಿಯೂ ಏನೂ ನನದಲ್ಲಾ

ಮತ್ತೇಕೆ ನಾನು ನನದು

ನಾನೆಂಬ ಮೂರ್ಖ.

ಮೇ 27, 2009

ಶೂನ್ಯ.

Filed under: ಅರಿಯದೇ ಬಂದದ್ದು — kavya gowda @ 12:23 ಅಪರಾಹ್ನ

ಸೃಷ್ಟಿಕರ್ತ ದೇವ

ಸೃಷ್ಟಿಸಿದ್ದೇನೂ ಇಲ್ಲ

ಸೃಷ್ಟಿಸಿದ್ದೆಲ್ಲ ಬರೀ ಶೂನ್ಯ.

ಸೃಷ್ಟಿಸಿದನು ಭೂಮಿಯ

ಅದರಾಕಾರವೊಂದು ಶೂನ್ಯ

ಆಗಸವೂ ಶೂನ್ಯ

ಸೂರ್ಯ ಚಂದ್ರರೂ ಶೂನ್ಯ

ಕಾಲಚಕ್ರವೂ ಶೂನ್ಯ.

ಒಂದಕ್ಕೊಂದು ಕೂಡಿದ

 ಕೂಡಿದ್ದನ್ನು ಕಳೆದ

 ಗುಣಿಸಿ ಭಾಗಿಸಿ ಕೊನೆಗವನು

 ಉಳಿಸಿದ್ದು ಬರೀ ಶೂನ್ಯ.

ನೀನೆಂಬುದು ಏನಿಲ್ಲ

ನಾನೆಂಬುದು ಏನೇನೂ ಇಲ್ಲ

ನಾನು ನೀನು ಇರದೆ

ಬದುಕೆಂಬುದೊಂದು ಶೂನ್ಯ.

ಜನಿಸುವಾಗ ಏನೂ ತಂದಿಲ್ಲ

ಸತ್ತಾಗ ಕೊಂಡುಯ್ಯುವುದು ಏನಿಲ್ಲ

 ಕೊಟ್ಟಿದ್ದು ಏನಿಲ್ಲ

ಪಡೆದದ್ದೂ ಏನೂ ಇಲ್ಲ

ಎಲ್ಲ ಇದ್ದೂ ಏನೂ ಏನಿಲ್ಲದ

 ಈ ಶೂನ್ಯ ಜಗತ್ತಿನಲಿ

ಜೀವನವೊಂದು ಬರೀ ಶೂನ್ಯ.

ಮುಂದಿನ ಪುಟ »

Create a free website or blog at WordPress.com.