ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

ಡಿಸೆಂಬರ್ 11, 2010

ಮನದಾಳದ ನೋವು

Filed under: ಅರಿಯದೇ ಬಂದದ್ದು — kavya gowda @ 10:32 ಫೂರ್ವಾಹ್ನ

ಏಷ್ಟೋ ಹಾಳೆಗಳ ಮೇಲೆ
ಪದಗಳು ಸೇರಿ ನರ್ತನ
ಮಾಡಿ ಅರಳಿರಿವುದೊಂದು ಕತೆ,
ಆದ ಕೂಡಿಸಿ ಓದುವೆಯಾದರೆ
ನಾಯಕ ನೀನಾಗಿರುವೆ
ಕಳನಾಯಕಿ ನಾನಾಗಿರುವೆ
ನಿನ್ನ ಯೋಚನೆಗೆ.
ನಿನಗೆ ಸಂತಸವಿಲ್ಲ
ಎನಗೆ ಬೇಸರ ತಪ್ಪಿದಲ್ಲ
ತಪ್ಪುಗಳು ಇಬ್ಬರಲಿದ್ದರೂ
ನಾ ಹೇಳಿದ್ದು ನಿನಗೆ ಬೇಡ
ನೀ ಹೇಳುವುದು ನನಗೂ ಬೇಡ.
‘ಪ್ರೀತಿ’ ಇಬ್ಬರಲೂ
ತುಳುಕಿ ತೂರಾಡಿದೆಯಾದರೂ
ಸನಿಹ ಇಬ್ಬರಿಗೂ ಬೇಡವಾಗಿದೆ.
ನನ್ನ ಮಾತು ನಿನಗೆ ಹಿಡಿಸದು
ನಿನ್ನ ಮಾತು ನನಗೂ ಹಿಡಿಸದು
ಆದರೂ ನಿಲ್ಲದ್ದು ವಾದ
ನಾ ಸೋಲಲಾರೆ
ನೀ ಸೋಲಬಯಸಲಾರೆ
ಕೊನೆಗೆ ತುಕ್ಕು ಹಿಡಿದದ್ದು
ಒಂದಾಗಬೇಕಾದ ಸಂಬಂಧ.
ನೀನು ಪ್ರೀತಿಸಿದ್ದೆ
ನಾನು ಪ್ರೀತಿಸಿರುವೆ
ಎಲ್ಲರೂ ಒಪ್ಪಿದ್ದು
ಆದರೂ ಒಂದಾಗಲಾಗದ್ದು
ವಿಪರ್ಯಾಸವಾದರೂ
ಬ್ರಹ್ಮ ಗೀಚಿದ್ದು
ದೇವರು ಬಯಸಿದ್ದು.
ಇದ ನೀ ಒಪ್ಪಲಾರೆ
ನಾನು ಒಪ್ಪಿಕೊಳ್ಳಲಾರೆ
ಆದರೆ ಎಲ್ಲಿಯವರೆಗೆ
ಸಮಯ ನಿಲ್ಲುವುದೇ,
ನಾನು ನೀನು ಅಲ್ಲ
ನನ್ನದು ನಿನ್ನದೂ ಆಗಲಿಲ್ಲ
ನಾನೊಂದು ತೀರ
ನೀನೊಂದು ತೀರ
ಇಬ್ಬರದೂ ವಿರಹಾ
ಆದರೂ ಜೀವನವೊಂದು
ನಿಲ್ಲದ ಪ್ರಯಾಣ.

Advertisements

4 ಟಿಪ್ಪಣಿಗಳು »

 1. ಬ್ರಹ್ಮ ಗೀಚಿದ್ದು antha summanagade sambhandha saripadisalu prathyana pattare manadalada novu mayavathugthe alwa!!!

  Comment by DGM — ಫೆಬ್ರವರಿ 21, 2011 @ 1:56 ಅಪರಾಹ್ನ | ಉತ್ತರ

 2. nice..

  visit my blog @ http://ragat-paradise.blogspot.com

  RAGHU

  Comment by RAGHU — ಮೇ 15, 2011 @ 1:29 ಅಪರಾಹ್ನ | ಉತ್ತರ

 3. thank u, ee kavya thumba chennagide,

  Comment by shivaraju.k.bindas — ಆಗಷ್ಟ್ 29, 2013 @ 8:41 ಫೂರ್ವಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Blog at WordPress.com.

%d bloggers like this: