ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

ಜನವರಿ 12, 2009

ಬೇಸರ

Filed under: ಅರಿಯದೇ ಬಂದದ್ದು — kavya gowda @ 1:20 ಅಪರಾಹ್ನ
Tags:

ಕನಸಿನಲಿ ಬಂದ ರಾಜಕುಮಾರ 

ಬಂದಿರಲು ಸನಿಹ ಬೆಚ್ಚಿ ಬೆದರಿ

ನೋಡಿದ್ದೆ ಕುತೂಹಲದಲಿ

ನನ್ನ ಆತಂಕವನರಿತರೂ

ನನ್ನನುಮತಿಯನೂ ಕೇಳದೇ

ಮುಂಗುರುಳ ಸರಿಸಿ

ಚುಂಭಿಸಿದ್ದ ತುಟಿಗಳಿಗೆ

ರೂಪದಲಿ ಮನ್ಮಥನವ

ರತಿಯಾಗಿದ್ದೆ ನಾ ಕೆಲ ಸಮಯ

ನನ್ನನಾನೇ ಮರೆತು

ಬಿಟ್ಟ ಕಂಗಳ ಮುಚ್ಚದೆ

ನೋಡಿದ್ದೆ ಅವನಂದವ

ನನಗರಿವ ಕೊಡದೇ

ಸೋತಿತ್ತು ಮನ ಅವನಿಗೆ.

 ಒಮ್ಮೆ ಅವನೆದೆಗೆಒರಗಿ

ಹೃದಯ ಬಡಿತವ ಕೇಳುವಾಸೆ

ನನ್ನ ಮನದ ಮಾತ

ಅರಿತವನಂತೆ ಬರಸೆಳೆದು
ಬಾಹುವಿನಲಿ  ಅಪ್ಪಿ

ಮುತ್ತನಿತ್ತಿದ್ದ ಹಣೆಗೆ

ಎಂತಹ ರಸಿಕ ,ಮನಸೋತು

ಒರಗಿದ್ದೆ ಅವನೆದೆಗೆ

ಅವನೆದೆಯ ಬಿಸಿ ಉಸಿರ

ಡವಡವದಲಿ ನನ್ನೆದೆಯ ಬಡಿತ

ಜೋರಾಗುತಿರಲು

ಮನ ಎಚ್ಚರಿಸಿ ಬುದ್ಡಿ ಹೇಳಿ

ಬಿಡಿಸಿಕೊಳ್ಳ ಹೊರಟವಳಾ

ಕಿವಿಯಲ್ಲಿ ಪಿಸುರಿದ್ದ

ಹೋಗದಿರು ನಲ್ಲೇ ನನ್ನಿಂದ ದೂರ

ಪ್ರೀತಿಸಿರುವೆ ನಾನಿನ್ನ ಮನಸಿನಲೆ.

 ಮನಸಾರೆ ಮುದ್ದಿಸಿದೆ 

ಹೃದಯದಲೆ ಪೂಜಿಸಿದೆ

ಪ್ರೀತಿಸಿದೆ ,ಪ್ರೇಮಿಸಿದೆ

ಅವನಿಲ್ಲದೇ ನಾನಿಲ್ಲವಾಗಿ

ನನ್ನೇ ನಾ ಮರೆತಿರಲು

ಕಾಣದೆ ಮರೆಯಾಗಿದ್ದ
ಹೇಳದೇ ಕೇಳದೇ.

ಹುಡುಕಿದೆ

ದಮಯಂತಿ  ಮರೆಯಾದ ನಳನ ಹುಡುಕಿದಂತೆ,

ಕೂಗಿದೆ

ಗಂಟಲು ಕಿತ್ತು ಬರುವವರೆಗೆ,

ರೋಧಿಸಿದೆ

ಹೃದಯ ಬಡಿತ ನಿಲ್ಲಿಸುವಂತೆ

ಅತ್ತಿದ್ದೆ ಕಣ್ಣಲ್ಲಿ  ರಕ್ತ ಸೋರುವಂತೆ.

 
ಬೇಸರ ಗೊಂಡಿತ್ತು ಮನಸು

ಬಾರವಾಗಿತ್ತು ಹೃದಯ

ಸೂರ್ಯನ ಕಿರಣದ ಬೆಳಕು ಮೊಗವ

ತಗುಲಿ ಕನಸ ಎಚ್ಚರಿಸಿದರೂ

ಅಳುತಲೆ ಇದ್ದೇ ಮರೆಯಾದ

ರಾಜಕುಮಾರನ ನೆನಪಿನಲೆ.

Advertisements

2 ಟಿಪ್ಪಣಿಗಳು »

  1. ನಮಸ್ತೆ.. ನಾಡಿದ್ದು 8-03-2009 ರಂದು ನಡೆಯುವ ಅಮ್ಮನ ಹಬ್ಬಕ್ಕೆ ನಿಮ್ಮನ್ನು ಆಮಂತ್ರಿಸಲು ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ… ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ. ನೀವು ಬಂದರೆ ತುಂಬಾ ಸಂತೋಷ ಆಗುತ್ತೆ.

    ಶುಭವಾಗಲಿ,
    – ಶಮ, ನಂದಿಬೆಟ್ಟ

    Comment by minchulli — ಮಾರ್ಚ್ 2, 2009 @ 2:14 ಅಪರಾಹ್ನ | ಉತ್ತರ

  2. Adbhuthavagide dear kavya, e bhavanegalu preethinda dooravada prathiyobbara hrudayada badithavagiratte. Wish u all da very best.

    Comment by Amrutha — ಜೂನ್ 22, 2009 @ 5:56 ಫೂರ್ವಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Create a free website or blog at WordPress.com.

%d bloggers like this: