ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

ಡಿಸೆಂಬರ್ 29, 2008

ನನ್ನ ನಲ್ಲ

Filed under: ಅರಿಯದೇ ಬಂದದ್ದು — kavya gowda @ 9:58 ಫೂರ್ವಾಹ್ನ
Tags:

ನನ್ನ ನಿದ್ರೆಯೆಲ್ಲ
ಅವನಿಗೆ ಮೀಸಲೆಂಬಂತೆ
ನಾ ಕಣ್ಣು ಮುಚ್ಚಿದೊಡನೆಯೇ
ಚೋರನಂತೆ ಬಂದು
ಹಿಂದೆ ಮುಂದೆ
ಸುತ್ತ ಮುತ್ತಾ
ಬಿಡದೆ ತಿರುಗುತಿದ್ದವನಿಗೆ
ಹುಚ್ಚಿವನಿಗೆಂದು ಬೈದರೂ
ಕೇಳದವನಂತೆ ನಟಿಸುತಿದ್ದವ,
ಎದುರು ಬಂದರೆ
ಬಿಟ್ಟ ಕಣ್ಣ ಮುಚ್ಚದೆ
ಇನ್ನೇನು  ನನ್ನ
ನುಂಗಿ ಬಿಡುವಂತೆ ನೋಡಿ
ನಾನು ನಾಚಿ 
ಕರಗುವಂತೆ ಮಾಡುತಿದ್ದವ,
ಸನಿಹ ಬಂದು
ತೋಳಲಿ ನನ್ನ ಬಳಸಿ
ಹಣೆಗೆ ಮುತ್ತನಿತ್ತು 
ಮುದ್ದಿಸಿ ಪ್ರೀತಿಸುತಿದ್ದವ
ನಾ ಕಣ್ಣ ಬಿಟ್ಟವೊಡನೆ
ಬೇಸರಗೊಂಡವನಂತೆ
ಹಗಲಿನಲಿ ನೀ ನನ್ನವಳಲ್ಲ
ಮತ್ತೆ ರಾತ್ರಿ ಬರುವೆನೆಂದು
ಮರೆಯಾಗಿ ಹೋದ
ನನ್ನ  ನಲ್ಲ
ನನ್ನ ಕನಸ ರಾಜಕುಮಾರ

8 ಟಿಪ್ಪಣಿಗಳು »

  1. Kavya.. once again you have done great work. keep it up..PP(Put Pille)

    ಪ್ರತಿಕ್ರಿಯೆ by Karthik — ಡಿಸೆಂಬರ್ 29, 2008 @ 11:43 ಫೂರ್ವಾಹ್ನ | ಉತ್ತರ

  2. ನಾ ಕಣ್ಣ ಬಿಟ್ಟವೊಡನೆ
    ಬೇಸರಗೊಂಡವನಂತೆ
    ಹಗಲಿನಲಿ ನೀ ನನ್ನವಳಲ್ಲ
    ಮತ್ತೆ ರಾತ್ರಿ ಬರುವೆನೆಂದು
    ಮರೆಯಾಗಿ ಹೋದ

    🙂

    ಚೆನಾಗಿದೆ..

    ಪ್ರತಿಕ್ರಿಯೆ by ರಂಜಿತ್ — ಡಿಸೆಂಬರ್ 30, 2008 @ 10:39 ಫೂರ್ವಾಹ್ನ | ಉತ್ತರ

  3. ಕವನದ ಮೊದಲ ಮೂರು ಹಂತಗಳ ಪ್ರೀತಿ ಮಾತು ನಾಲ್ಕನೇ ಹಂತದಲ್ಲಿ ಮರೆಯಾಗಿ ಬೇರೆಯದೇ ದಿಕ್ಕಿಗೊಯ್ಯುತ್ತದೆ… ಯಾಕೋ ಕೊನೆಯ ಸಾಲುಗಳು ಮೊದಲಿಗೆ ಸಪೋರ್ಟ್ ಮಾಡ್ಲಿಲ್ಲ ಅನ್ನಿಸ್ತು… ಆದರೂ ಚೆನ್ನಾಗಿದೆ…

    ಪ್ರತಿಕ್ರಿಯೆ by Kallare — ಡಿಸೆಂಬರ್ 31, 2008 @ 4:21 ಫೂರ್ವಾಹ್ನ | ಉತ್ತರ

  4. kavya nima kavana super 🙂

    ಪ್ರತಿಕ್ರಿಯೆ by ranjitha — ಡಿಸೆಂಬರ್ 31, 2008 @ 6:01 ಫೂರ್ವಾಹ್ನ | ಉತ್ತರ

  5. Tumba chennagi moodi bandide kavya..

    ಪ್ರತಿಕ್ರಿಯೆ by Prasanna — ಜನವರಿ 1, 2009 @ 5:21 ಅಪರಾಹ್ನ | ಉತ್ತರ

  6. nice one

    ಪ್ರತಿಕ್ರಿಯೆ by ವಿಜಯರಾಜ್ ಕನ್ನಂತ — ಜನವರಿ 5, 2009 @ 10:02 ಫೂರ್ವಾಹ್ನ | ಉತ್ತರ

  7. ಚೆನ್ನಾಗಿದೆ… ಕಾವ್ಯ, ನಿಮ್ಮ ಕವನ! 🙂

    ಪ್ರತಿಕ್ರಿಯೆ by ಪ್ರದೀಪ್ — ಜನವರಿ 6, 2009 @ 5:04 ಫೂರ್ವಾಹ್ನ | ಉತ್ತರ

  8. Kavya, e kanasu thumba chennagide.

    ಪ್ರತಿಕ್ರಿಯೆ by Amrutha Patil — ಜೂನ್ 22, 2009 @ 6:02 ಫೂರ್ವಾಹ್ನ | ಉತ್ತರ


RSS feed for comments on this post. TrackBack URI

Leave a reply to Prasanna ಪ್ರತ್ಯುತ್ತರವನ್ನು ರದ್ದುಮಾಡಿ

Create a free website or blog at WordPress.com.