ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

July 21, 2008

ನಿಹಾರಿಕಾ

Filed under: ಕಥೆ — kavya gowda @ 12:04 pm
ಪ್ರೀತಿಸಿಯೆ, ಎಲ್ಲರ ಒಪ್ಪಿಗೆ ಪಡೆದೇ ಮದುವೆಯಾಗಿದ್ದರು ಆ ದಂಪತಿಗಳು .ಆದರೆ ಇಬ್ಬರಲ್ಲೂ ಏನೂ ಕೊರತೆ. ಇಬ್ಬರೂ ಸಂತೋಷವಾಗಿರಲಿಲ್ಲ ,ಕಾರಣ ಇಬ್ಬರಿಗೂ ಹೊಂದಾಣಿಕೆ ಎನ್ನುವುದೇ ಗೊತ್ತಿರಲಿಲ್ಲ. ಚಿಕ್ಕಪುಟ್ಟದ್ದಕ್ಕೂ ಜಗಳ , ಕಿತ್ತಾಟ. ಅವ ಹೇಳಿದ್ದು ಅವಳು ಒಪ್ಪಳು ,ಅವಳು ಹೇಳಿದ್ದು ಅವನು ಕೇಳನು. ಮನೆಯಲ್ಲಿ ಯಾವಾಗಲು ಕಿರಿಕಿರಿ . ಬಡವರೇನಲ್ಲ , ಶ್ರೀಮಂತರೇ . ನೋಡುವವರಿಗೆಲ್ಲ ಇವರ ಸಂಸಾರ ಒಂದು ವಿಚಿತ್ರ ಸಂಸಾರ.ಹೀಗೆ ಒಂದೆರಡು ವರುಷಗಳ ಕಳೆದ ನಂತರ ಇವರಿಗೊಂದು ಮುದ್ದಾದ ಹೆಣ್ಣು ಮಗು .ಹೆಸರು ನಿಹಾರಿಕಾ. ಗಂಡ ಹೆಂಡತಿಯಲ್ಲಿ ಜಗಳ ಕಿತ್ತಾಟವಿದ್ದರು ಮಗಳನ್ನು ಮುದ್ದಾಗಿಯೇ ಬೆಳೆಸಿದರು.ಒಳ್ಳೆಯ  ವಿದ್ಯಾಭ್ಯಾಸವನ್ನೂ ಕೊಡಿಸಿದರು. 
ಆದರೆ  ಬೆಳೆಯುತಿದ್ದ ನಿಹಾರಿಕಳಿಗೆ  ಅಪ್ಪ ಅಮ್ಮನ ನಡವಳಿಕೆ  ಜಗಳ ಬೇಸರ ತರಿಸತೊಡಗಿತ್ತು. ದಿನ ದಿನ ಚಿಕ್ಕಪುಟ್ಟದ್ದಕ್ಕೂ ಕಿತ್ತಾಡುವುದನ್ನ ರೇಗಾಡುವುದನ್ನ ನೋಡಿ ನೋಡಿ ಸಾಕಾಗಿ ಹೋಗಿತ್ತು .ಅವರು ಎಷ್ಟೇ ಪ್ರೀತಿಯಿಂದ ನೋಡಿಕೊಂಡರು ೧೦ ನೆ  ತರಗತಿ ಮುಗಿಯುತಿದ್ದಂತೆ ಮನೆಯಲ್ಲಿರುವುದಕ್ಕೆ ಬೇಸರಗೊಂಡು ಹಾಸ್ಟೆಲ್  ಸೇರಿದ್ದಳು.ಪಾಪ ಅರಿಯದ ಹುಡುಗಿ ಹಾಸ್ಟೆಲ್ ನಲ್ಲಿ ಇದ್ದ ಹುಡುಗಿಯರ ಜೊತೆ ಸೇರಿ ಕೆಟ್ಟ ಬುದ್ದಿಗಳನ್ನೆಲ್ಲ ಕಲಿಯ ತೊಡಗಿದಳು .ಕಾಲೇಜ್ ಬೇರೆ . ಕೇಳಿದಷ್ಟು ಹಣ ಮನೆಯಲ್ಲಿ ಕೊಡುತಿದ್ದರು . ಯಾವುದಕ್ಕೂ ಕೊರತೆ ಇರಲಿಲ್ಲ  .ಚೆನ್ನಾಗಿ ಓದುತಿದ್ದ ಹುಡುಗಿ ಸಿನಿಮಾ, ಹೋಟೆಲ್ ಸುತ್ತಾಟವೆಂದು ಓದುವುದನ್ನೇ ಮರೆತಿದ್ದಳು . ಅಪ್ಪ ಅಮ್ಮ ತಮ್ಮ ಅರ್ಥವಿಲ್ಲದ ಜಗಳದಲ್ಲಿ ಇದನ್ನು ಗಮನಿಸಲೇ ಇಲ್ಲ.
ಹೀಗೇ ಮತ್ತೆರಡು ವರ್ಷಗಳು  ಕಳೆದು ಹೋಗಿದ್ದವು .
ಯಾರ ಭಯವೂ ಇಲ್ಲದೆ ಬೆಳೆಯುತಿದ್ದ ನಿಹಾರಿಕಾ ತನ್ನನ್ನು ಕೇಳುವವರು ಹೇಳುವವರು ಯಾರು ಇಲ್ಲ ,ಅಪ್ಪ ಅಮ್ಮನಿಗೆ ಅವರ ಜಗಳವೇ ಹೆಚ್ಚು ಅವರು ನನ್ನ ಬಗ್ಗೆ ಕೇಳುವುದಿಲ್ಲ  ಎಂದುಕೊಂಡವಳಿಗೆ  ಹರ್ಷ ಎನ್ನುವ ಯಾವ ಕೆಲಸಕ್ಕೂ ಬಾರದ ಹುಡುಗನೊಬ್ಬನ  ಪರಿಚಯವಾಯ್ತು . ಇವರಿಬ್ಬರ ಪರಿಚಯ ಸ್ನೇಹವಾದಾಗ  ಪಾಪ  ನಿಹಾರಿಕ ಅವನನ್ನು  ಪ್ರೀತಿಸ ತೊಡಗಿದಳು .ಅವನೂ ಪ್ರೀತಿಸಿದ್ದ  ಆದರೆ ಅವಳನ್ನಲ್ಲ  , ಬೇಕು  ಬೇಕಾದ ಹಾಗೆ ಖರ್ಚು ಮಾಡುತಿದ್ದ ಇವಳ ಹಣವನ್ನು  ಮಾತ್ರ ಪ್ರೀತಿಸಿದ್ದ .ಪಾಪ ಇದು ಆ ಹುಡುಗಿಗೆ ತಿಳಿಯದಾಗಿತ್ತು. ಇವಳ ಪ್ರೀತಿಯ ವಿಷಯ ಅಪ್ಪ ಅಮ್ಮನಿಗೆ ತಿಳಿಯಲೇ ಇಲ್ಲ . ಅವರ ಜಗಳಗಳು ಮುಗಿಯದೆ ಹಾಗೆ ಸಾಗುತಿತ್ತು .
ಹರ್ಷನೊಂದಿಗಿನ ಸುತ್ತಾಟ ಹೆಚ್ಚಾಗತೊಡಗಿತು . ನಿಹರಿಕಳ  ಓದು ನಿಂತೇ ಹೋಗಿತ್ತು .  ಜೊತೆಗಿದ್ದ ಗೆಳತಿಯರೆಲ್ಲ ದೂರಾಗಿದ್ದರು .ಹೀಗೆ  ಯಾರ ಭಯವೂ ಇಲ್ಲದೆ ಹರ್ಷ ನೊಡನೆ  ಸುತ್ತಾಡುವುದನ್ನು  ನೋಡಿದ ಯಾರೋ ಊರಿನ ಪರಿಚಯದ ಸ್ನೇಹಿತರು ಇವಳ ಸುತ್ತಾಟವನ್ನು ನೋಡಿ ಅಪ್ಪ ಅಮ್ಮನಿಗೆ ವಿಷಯವನ್ನ ತಿಳಿಸಿದ್ದರು.ವಿಷಯ ತಿಳಿದ ಅಪ್ಪ -ಅಮ್ಮ ಕೋಪಗೊಂಡರೆ ಹೊರತು ಅವರ ತಪ್ಪು ಅವರು ಅರಿಯಲೇ ಇಲ್ಲ . ಇದಾದ ಮೇಲೂ ಅವರಿಬ್ಬರ ಜಗಳ ಕಿತ್ತಾಟ ನಿಲ್ಲಲಿಲ್ಲ. ಒಬ್ಬರ ನೊಬ್ಬರು ದೂರಿಕೊಳ್ಳುವುದು ಇನ್ನೊ ಹೆಚ್ಚಾಗಿತ್ತು. ನಿಹಾರಿಕಳನ್ನು  ಹಾಸ್ಟೆಲ್ ನಿಂದ  ಬಿಡಿಸಿ ಕರೆದು ಕೊಂಡು ಬಂದು ಮನೆಯಲ್ಲಿ ಕೂಡಿ ಹಾಕಿದ್ದು ಆಯಿತು. ಪಾಪ ಮನೆಯಲ್ಲಿ ನಿಹಾರಿಕಳಿಗೆ ಹುಚ್ಚು ಹಿಡಿಯುವ ಹಾಗಾಗ ತೊಡಗಿತು .ಅಪ್ಪ ಅಮ್ಮ ಅವಳಿಗೆ ಬುದ್ಡಿ ಹೇಳುವುದ ಬಿಟ್ಟು ಈ ವಿಷಯವಾಗಿ ಜಗಳಗಳನ್ನು ಹೆಚ್ಚು ಮಾಡ ತೊಡಗಿದಾಗ ಪಾಪ ಹುಡುಗಿ ಮನೆ ಬಿಟ್ಟು ಹರ್ಷನೊಂದಿಗೆ ಹೋಗುವ ನಿರ್ಧಾರ ಮಾಡಿ  ವಿಷಯವನ್ನು ಹರ್ಷನಿಗೆ  ಹೇಳಿದಾಗ ಅವನೂ ಒಪ್ಪಿದ್ದ .
ಹರ್ಷ ಕೂಡಾ ಇದೆ  ಸಮಯಕ್ಕಾಗಿ ಕಾಯುತಿದ್ದನೆಂಬ ಸತ್ಯ  ಪಾಪ ಅವಳಿಗೆ ಹೊಳೆಯಲೇ ಇಲ್ಲ . ಇದೆ ಸಮಯಕ್ಕಾಗಿ  ಕಾದಿದ್ದ ಹರ್ಷ ನಿಹಾರಿಕಳ ಮನವೊಲಿಸಿ ಮನೆಯಿಂದ ಹಣ ಒಡವೆಗಳನೆಲ್ಲ ತೆಗೆದುಕೊಂಡು ಬರುವಂತೆ  ಹೇಳಿದ. ಹುಚ್ಚು ಹುಡುಗಿ , ಮನೆಯಿಂದ ದೂರಾಗುವ ಯೋಚನೆಯಲ್ಲಿ ತನ್ನ ಕೈಗೆ ಸಿಕ್ಕ ಒಡವೆ ಹಣ ಎಲ್ಲ ತೆಗೆದುಕೊಂಡು ಮುಂದಿನ ಅನಾಹುತಗಳನ್ನು ಯೋಚಿಸದೇ ಅವನೊಂದಿಗೆ ಮನೆ ಬಿಟ್ಟು ಓಡಿ ಬಂದಿದ್ದಳು.ಅಪ್ಪ ಅಮ್ಮನನ್ನು  ತೊರೆದಿದ್ದಳು .
ನಿಹಾರಿಕಳ   ತಂದೆ ತಾಯಿಗೆ  ಏನಾಯ್ತು  ಎಂದು  ತಿಲಿಯುವುದರವೊಳಗೆ  ನಿಹಾರಿಕ ಅವರಿಂದ , ಅವರ ಮನೆಯಿಂದ ದೂರ ಹೋಗಿದ್ದಳು .ಎಲ್ಲ ಕಡೆ  ಹುಡುಕಿದರೂ ಹುಡುಕಿಸಿದರೂ  ನಿಹಾರಿಕ ಸಿಗದಾಗಿದ್ದಳು . ಕೊನೆಗೆ ಏನು ಮಾಡುವುದೆಂದು ತಿಳಿಯದ ಅಪ್ಪ ಅಮ್ಮ ಪೋಲಿಸ್ ನವರಿಗೂ ದೂರನ್ನು ಕೊಟ್ಟಿದ್ದರು.ಪೋಲಿಸ್ ನವರು ಅವರ ಕೆಲಸ ಅವರು ಮಾಡುತಿದ್ದರು .  ಪಾಪ ಅಪ್ಪ ಅಮ್ಮನಿಗೆ ತಮ್ಮ ತಪ್ಪಿನ ಅರಿವಾಗಿತ್ತು . ನಿಹಾರಿಕಳ ಈ ತಪ್ಪು ನಿರ್ದಾರಕ್ಕೆ ತಾವೇ ಕಾರಣ ಎನ್ನುವ ಸತ್ಯ ಇಬ್ಬರಿಗೂ ತಿಳಿದಿತ್ತು . ತಮ್ಮ ತಪ್ಪಿನ ಅರಿವಾಗಿ ತಪ್ಪನ್ನು ತಿದ್ದಿಕೊಂಡು ಒಬ್ಬರ  ದುಃಖಕ್ಕೆ  ಒಬ್ಬರಾದರೆ   ಪಾಪ  ಏನೂ  ಅರಿಯದೇ ತಪ್ಪು ಮಾಡಿದ ನಿಹಾರಿಕಾ ,
ಅವಳು ಮಾಡಿದ್ದೂ ತಪ್ಪು ಎಂದು ಅರಿವಾಗುವಷ್ಟರಲ್ಲಿ ಹರ್ಷ ಅವಳಿಗೆ ಮೋಸ  ಮಾಡಿ ಅವಳನ್ನು ಬಿಟ್ಟು ಹೋಗಿದ್ದ. ಪ್ರಾಣ ಕಿಂತ  ಹೆಚ್ಚಾಗಿ ಪ್ರೀತಿಸಿದ  ಹರ್ಷ ಮೋಸ , ಚಿಕ್ಕ ವಯಸ್ಸಿನ ಅವಳು ಒಂಟಿಯಾಗಿ ಜೀವನ ನಡೆಸಲಾಗದ ಅಸಹಾಯಕತೆ , ಮನೆಯ ಪರಿಸ್ಥಿತಿ  ಇವೆಲ್ಲವನ್ನೂ ಯೋಚಿಸಿದ ನಿಹಾರಿಕ  ತಂದೆ ತಾಯಿಗೆ ಮುಖವನ್ನು ತೋರಿಸುವ ಮನಸಿಲ್ಲದೇ ಆತ್ಮಹತ್ಯೆ ಮಾಡಿಕೊಂಡು ಅನಂತದೆಡೆಗೆ  ಪ್ರಯಾಣ ಬೆಳೆಸಿ ನಿಹಾರಿಕೆಯಾದಳು .

July 17, 2008

ಕನಸು

————-
ಚಿಂತೆಯಲ್ಲಿರುವ ಜೀವಕ್ಕೆ
ಚಿಂತೆಗಳ ಹೆಚ್ಚಿಸಿ
ಪ್ರೀತಿಸುವವರ ಪ್ರೀತಿಯನು
ಅವರಿಗರಿಯದೆ ನೋಯಿಸಿ
ದಣಿದ ಜೀವಗಳು
ಬೆಚ್ಚಿ ಹೆದರುವಂತೆ ಮಾಡಿ
ನಮಗರಿಯದೆ ನಮ್ಮ ನಗಿಸಿ
ಅಳುವಂತೆ ಮಾಡಿ ಹಿಂಸಿಸಿ
ಏನಾಯ್ತೆಂದು ಅರಿಯುವುದರೊಳಗೆ 
ಮಿಂಚಿನಂತೆ ಮರೆಯಾಗಿ 
ಯೋಚಿಸುವಂತೆ ಮಾಡಿ 
ಏನನೋ  ಗೆದ್ದ  ಹೆಮ್ಮೆಯಲಿ
ತಾನು ಸಂತಸವಾಗಿ
ನಾಳೆ ಮತ್ತೆ ಬರುವೆ ಎನ್ನುವವಳು .
———————  

July 16, 2008

ತಪ್ಪು

Filed under: ಅರಿಯದೇ ಬಂದದ್ದು — kavya gowda @ 12:00 pm
ನಿನ್ನ ನೋಟದ ಅರ್ಥ
ಅರಿವಾದರೂ
ನಿನ್ನ ಬಾಹುಬಂದನದಲ್ಲಿ
ಬಂಧಿಯಾಗಿದ್ದು .

July 15, 2008

ವಿಪರ್ಯಾಸ

Filed under: ಅರಿಯದೇ ಬಂದದ್ದು — kavya gowda @ 12:53 pm

ನಾ ಬಚ್ಚಿ-ಇಟ್ಟೆ 
ಮನಸ ಬಾವನೆಗಳ
ತಿಳಿದು ನೀ ನನ್ನಿಂದ
ದೂರಾಗಬಹುದೆಂದು.
ವಿಪರ್ಯಾಸವೆಂದರೆ,
ನಾ ಅರಿಯದೇ ಹೋದದ್ದು
ನೀ ದೂರವಾಗಲು 
ನಾ ಬಚ್ಚಿ -ಇಟ್ಟ ಮನದ
ಬಾವನೆಗಳೆ
ಕಾರಣವಾಗುವುದೆಂದು.

July 14, 2008

ನಮ್ಮ ಬದುಕು ನಮ್ಮದೇ

Filed under: ಅರಿಯದೇ ಬಂದದ್ದು — kavya gowda @ 8:28 am

ಯಾರೂ ಯಾರಿಗಿಲ್ಲ

ಯಾರಿಗೆ ಯಾರೂ ಇಲ್ಲ

ಅವರು ನಿನ್ನವರಲ್ಲ,

ನೀನು ಅವರವನಲ್ಲ

ನಿನ್ನ ಬದುಕು ನಿನ್ನದೇ .

ಹೆತ್ತವರು ಹೆತ್ತರೂ

ಅವರು ನಿನ್ನವರಲ್ಲ

ಅವರಿರುವುದು ನೀ

ಜೀವನ ಕಲಿಯುವವರೆಗೆ !

ನಿನ್ನ ಜೀವನ  ನೀ

ನಡೆಸುವುದ ಕಲಿತ ಮೇಲೆ

ಅವರು ನಿನ್ನವರಲ್ಲ,ನೀ ಅವರವನಲ್ಲ

ನಿನ್ನ ಬದುಕು ನಿನ್ನದೇ.

ಅಕ್ಕ ತಮ್ಮ ,   ಅಣ್ಣತಂಗಿ 

ಗಂಡ ಹೆಂಡತೀ ಮಕ್ಕಳು

ಬಂದುಬಳಗ ನಿನ್ನವರಲ್ಲ

ಅವರಿರುವುದು ಅವರ ಅನಿವಾರ್ಯ,

ಅವಶ್ಯಕತೆ  ಈಡೇರುವ ವರೆಗೆ !

ಜೀವನ ಕಲಿತ ಮೇಲೆ

ನಿನ್ನ ಅವಶ್ಯಕತೆ ಇಲ್ಲವಾದರೆ

ಅವರು ನಿನ್ನವರಲ್ಲ, ನೀನು ಅವರವನಲ್ಲ

ನಿನ್ನ ಬದುಕು ನಿನ್ನದೇ .

ನೀ ಪ್ರೀತಿಸಿದವರೂ ನಿನ್ನವರಲ್ಲ

ನಿನ್ನ ಸ್ನೇಹಿತರೂ ನಿನ್ನವರಲ್ಲ

ಅವರಿರುವರು ಅವರ

ಪ್ರೀತಿ ಸಿಗುವವರೆಗೆ

ನೀ ಸುಖದಿ ಇರುವವರೆಗೆ!

ನಿನಗೆ ಸುಖವಿಲ್ಲದಾದಾಗ

ಅವರ ಪ್ರೀತಿ ಸಿಕ್ಕಾಗ

ಅವರು ನಿನ್ನವರಲ್ಲ,ನೀ ಅವರವನಲ್ಲ

ನಿನ್ನ ಬದುಕು ನಿನ್ನದೇ .

ಯಾರೂ ಯಾರಿಗಿಲ್ಲ

ಯಾರೂ ಯಾರವರಲ್ಲ

ಬದುಕು ನಮ್ಮದೇ…

  ಬದುಕು ನಮ್ಮದೇ ,

ಸಾವು ಬಳಿ ಬರುವವರೆಗೆ!!.

July 12, 2008

ಪ್ರೀತಿಯ ಮರೆಯಲು

Filed under: ಅರಿಯದೇ ಬಂದದ್ದು — kavya gowda @ 12:39 pm

ಪ್ರೀತಿಸಿ ಪ್ರೀತಿಯ

ಮರೆತ ನಲ್ಲಾನೇ,

ನನಗಿಲ್ಲ ನಿನ್ನ ಮೇಲೆ ಬೇಸರ.

ಬೇಸರವಾಗಿರುವುದು ನನಗೆ

ನನ ಮೇಲೆಯೇ

ನೀ ನನ ಪ್ರೀತಿಯ

ಮರೆಯಲು

ಕಾರಣ ನಾನೇ ಎಂದು……

ಏ ಹುಡುಗಾ

Filed under: ಪತ್ರಗಳು — kavya gowda @ 12:35 pm
ಏ ಹುಡುಗಾ,,,,,
ನಿನಗೆ ಗೊತ್ತುಂಟ,ಈ ಪ್ರೀತಿ ಅಂದರೆ ಏನು ಎಂಬುದೇ ನನಗೆ ತಿಳಿದಿರಲಿಲ್ಲ.
ಹುಡುಗಾಟದ ವಯಸ್ಸು ,ಕುದುರೆಯಂತೆ ಓಡುತಿದ್ದ ಮನಸ್ಸು.ಹೇಳುವವರು ಕೇಳುವವರು ಯಾರೂ ಇಲ್ಲ, ನಾ ಮಾಡಿದ್ದು ತಪ್ಪು
ಎಂದು ಹೇಳುವವರೇ ಇರಲಿಲ್ಲ;ಈ ಸಮಯದಲ್ಲಿ ಆದ ನಿನ್ನ ಪರಿಚಯ ಒಂದು ಕಾಲ್ಪನಿಕ ಕತೆ.
ನಿನಗಾಗಾ ನನ್ನ ಸ್ನೇಹ ಬೇಕಿತ್ತು ,ನನಗೂ ನೀನೆಂದರೆ ಏನೋ”ನಿನ್ನ ಮಾತು ,ನಗು , ಚೆಲ್ಲು ಚೆಲಾಟ ಎಲ್ಲ ಬೇಕು.
ನೀನೆಂದರೆ ನನಗೆ ಒಂದು ರೀತಿಯ ಹುಚ್ಚು ಹುಚ್ಚು
ಇಲ್ಲೇ ನೋಡಿದ್ದು ನಿನ್ನ ಪ್ರೀತಿ,ನೀ ನಿನ್ನ ಪ್ರಿಯತಮೆಗೆ ತೋರುತಿದ್ದ ಪ್ರೀತಿ.
ನಿನ್ನ ಪ್ರೀತಿಯ ಬೇಡವೆಂದು ಅವಳು ತಿರಸ್ಕರಿಸಿದಾಗ
ನೀ ನನಗೆ ಸಿಗುವೆಯೆಂದು ಕುಣಿದಾದಿತ್ತು ಈ ನನ್ನಅರಿಯದ ಮನಸ್ಸು.ಅವಳಿಗಾಗಿ ನೀ ಅತ್ತು, ಕರೆದು
ಅವಳಿಗಾಗಿ ಮಿಡಿದ ನಿನ್ನ ಹೃದಯವ ನಾ ಬಯಸಿದೆ.ನಿನಗೂ ನಾ ಬೇಕಿತ್ತು , ನೀ ಕೂಡ ಒಪ್ಪಿಕೊಂಡೆ
ನನ್ನ ಪ್ರೀತಿಸಿದೆ, ನಿನ್ನ ಪ್ರೀತಿಯಲಿ ನಾ ಹಾರಡಿದೆ ,ಸಂತೋಷಕ್ಕೆ ಕೊನೆಯೆ ಇಲ್ಲಾದಾಯ್ತು,
ಆದರೆ ಏನಂತೆ,ನಾ ಮರೆತಿದ್ದೆ !
ನಿನಗೆ ಹೇಳುವವರು ಕೇಳುವವರು ಇರುವರೆಂದು, ನೀ ಅವರ ಮರೆತಿದ್ದೆ.ಅವರ ನೆನಪಾಗಿ ನನ್ನಿಂದ ದೂರಗಲು ಬಯಸಿದೆ.
ನೀ ನನ್ನ ಪ್ರಿಯತಮಾನಾಗಿ ನನ್ನಿಂದ ದೂರಗುತಿರುವೆ
ಆದರೆ ನಾ ಎಂದೂ ನಿನ್ನ ಪ್ರಿಯತಮೆಯಗಲ್ಲಿಲ್ಲವಲ್ಲಾ,,,,,,,,,,
ಒಂಟಿಯಾಗಿ ದುಂಖಿಸುವಂತೆ ಮಾಡಿ ,ಪ್ರೀತಿಸುವುದ ಕಲಿಸಿ
ಪ್ರೀತಿಯ ಮರೆಯುವುದ ಕಲಿಸದೇ ಮೌನವಾಗಿ ಮರೆಯಾಗಲು
ಹೊರೆಟಿರುವೆಯಲ್ಲ ನನ್ನ ಹುಡುಗಾ,,,,,,,,,,,,
ಮರೆಯಾಗಲು ಹೊರೆಟಿರುವೆಯಲ್ಲ ಓ ನನ್ನ ಹುಡುಗ.
ಇತಿ ನಿನ್ನ
*ಮರೆಯಲಾಗದವಳು *

July 9, 2008

ಹೇಗೆ ತೀರಿಸಲೇ ತಾಯೇ ..ನಿನ್ನ ಋಣವಾ

Filed under: ಅರಿಯದೇ ಬಂದದ್ದು — kavya gowda @ 10:29 am

ಒಂಬತ್ತು  ತಿಂಗಳು  ಹೊತ್ತು
ನನ್ನ ಹೆತ್ತೆಯಲ್ಲೆ .. ನನ್ನವ್ವ
ಎಸ್ಟೋಂದು ಕಷ್ಟ ನಾ
ಕೊಟ್ಟೇನಲ್ಲೇ$ ನನ್ನ ತಾಯಿ .
ಹೆಣ್ಣ ಹೆತ್ತೆಯೆಂದು 
ಎಲ್ಲ ಜರಿದರು ನಿನ್ನ
ಯಾರ ಮಾತಿಗೂ ನೋವ -
ದೇ ಸಾಕಿದೆಯಲ್ಲೇ.. ನನ್ನವ್ವ.
ಕಾಣದ ಜಗವ 
ಕಾಣಿಸಿದೆ ನೀ ನನಗ
ನಿನ್ನುಸಿರೆ””  ನನಗೂ ಇತ್ತು
ಜೀವವ ಕೊಟ್ಟೆಯಲ್ಲೇ $ನನ ತಾಯೇ.
ಅಮ್ಮಲಾದೆ ,ದೇವತೆಯಾದೆ
ಸ್ನೇಹಿತಳಾಗಿ ಸಲಹಿ
ಪೋಷಿಸಿ ಜೀವನ 
ಕಲಿಸಿ ಕೊಟ್ಟೆಯಲ್ಲೇ$ ನನ್ನ ಹೆತ್ತಮ್ಮ
ಹೇಗೆ ತೀರಿಸಲೇ 
ನನ್ನ ತಾಯೇ ನಿನ ಋಣವ
ನನ್ನವ್ವ ಹೇಗೆ ತೀರಿಸಲೇ , ನಿನ್ನ  ಋಣವ.

June 21, 2008

ನಿನಗಾಗಿ ಬರೆದಿರುವೆ

Filed under: ಅರಿಯದೇ ಬಂದದ್ದು — kavya gowda @ 7:54 am

ಗೆಳೆಯ ನೀ ಕೇಳಿದೆ
ನಿನ್ನ ಸ್ನೇಹ ಏಕೆ
ನನಗೆಂದು
ಉತ್ತರ ಇರಲಿಲ್ಲ
ಹೌದು ನಾ ಯಾರು
ನಾ ನಿನಗೇನೂ
ಏನೂ ಇಲ್ಲವೇ
ಮತ್ತೇಕೆ ನಿನ್ನ
ಸ್ನೇಹ ನನಗೆ
ಯೋಚಿಸಿಧೆ
ಉತ್ತರ ಹುಡುಕಿಧೆ…
ಕೇಳು  ನನಗೆ
ನೀನೊಬ್ಬ
ಅಮ್ಮನಂತೆ ಅಕ್ಕರೆ
ತೋರುವವ
ಅಪ್ಪನಂತೆ
ಪೋಷಿಸುವವ
ಅಣ್ಣನಂತೆ
ರಕ್ಷಿಸುವವ
ಅಕ್ಕಳಂತೆ ಧೈರ್ಯ
ನೀಡುವವ
ಪ್ರೇಮಿಯಂತೆ
ಪ್ರೀತಿಸುವ
ಮಗುವಿನಂತೆ
ಮುದ್ಧಿಸುವವ
ತಿಳಿಯಿತೇ ಕಾರಣ
ನಿನ್ನ ಸ್ನೇಹ ಏಕೆ
ನನಗೆಂದು

ಬಾಳಹಾದಿ

Filed under: ಅರಿಯದೇ ಬಂದದ್ದು — kavya gowda @ 7:10 am
ಬಾಳಹಾದಿಯಲಿ
ದಿನದಿನದ ಚಲನೆಯಲಿ
ಕಂಡ ಪ್ರಪಂಚ.
ಹುಟ್ಟಿದ ಅರಿವಿಲ್ಲ
ಅಂಬೆಗಾಲಿತ್ತ ನೆನಪಿಲ್ಲ
ಮೊದಲ ಮಾತು
ಕೇಳಲಾಗಲಿಲ್ಲ,
ಬೆಳೆಬೆಳೆದಂತೆ
ಬದಲಾದ ಆಕಾರ.....
ಅರಿವಿಲ್ಲದ್ದು ಅರಿವಾಗ ಹೊರಟಾಗ
ಉಳಿಯ ಹೊರಟಿದ್ದು ನೆನಪು....
ಹಂತಹಂತದ ಬೆಳವಣಿಗೆ
ಓದು- ಬರಹ ,
ಸ್ನೇಹ ಸುತ್ಟಾಟ
ತಿಳಿಯದೇ ಬರುವ
ಆಕರ್ಷಣೆ , ಪ್ರೀತಿ-ಪ್ರೇಮ
ವಿರಹ-ವೇದನೆ ....

ಯೌವನಜೊತೆ ಜೊತೆಗೆ
ಹೋಸ್ತಿಲಲಿ ಬಂದು
ನಿಲ್ಲುವ ಮದುವೆ
ಸಂಗಾತಿ -ಮಕ್ಕಳು, ತಂದೆ -ತಾಯಿ
ಮನೆ- ಮಠ, ಒಟ್ಟಾರೆ
ಮುಗಿಯದ ಸಂಸಾರ.....
ಸಂಸಾರಿಯಾಗಿ  ಸಹನೆಯಲಿ
ಎಲ್ಲ ಸಮನಾಗಿ , ಸರಿಯಾಗಿ
ಇನ್ನೇನು ನಾ ಸುಖೀ
ಎನ್ನುವಾಗ
ಯಾರೋ ದೂರಾದ ನೋವು-ಸಂಕಟ.

ಸಾಕು ಸಾಕು ಬೇಕಿನ್ನು ಏಕಾಂತ
ಎಂದರೆ..... ಬರುವುದೆಲ್ಲಿ????
ಅದು ದೂರ ದೂರ
ಸಾವು ಬರುವವರೆಗೆ
ನಮ್ಮ ಹತ್ತಿರ ಹತ್ತಿರ.
« Previous Page

Blog at WordPress.com.