ಪದೇ ಪದೇ ನೆನಪಾಗುತಿದೆ
ನನ್ನ ಆ ದಿನದ ಮೌನ…
ಘಾಡವಾದ ಪ್ರೀತಿ ನನದು
ಯಾವ ಕಲ್ಮಶವೂ ಇರಲಿಲ್ಲ.
ನನ್ನಷ್ಟೇ ನನ್ನ ಪ್ರೀತಿಯಲ್ಲೂ
ಇದ್ದದ್ದು ನಂಬಿಕೆ.
ಧೈರ್ಯ, ದೃಢ ನಿರ್ಧಾರ,
ಕಲ್ಪನೆ, ಕನಸು, ಭರವಸೆ
ಎಲ್ಲಾ ಇತ್ತು ನನ್ನ ಪ್ರೀತಿಯಲ್ಲಿ
ಆದರೇಕೆ
ಆ ದಿನ ನಾ ಮೌನವಾಗಿದ್ದು?
ನೀನಂದು ಆತುರದಲಿ ಬಂದು
ನಿನ್ನ ಮರೆತುಬಿಡೆಂದಾಗ,
ಪ್ರೀತಿಸಿದ ಪ್ರೀತಿಯನು
ದೂರಮಾಡಿ ವಂಚಿಸಿದಾಗ
ನಾನೇಕೆ ಮೌನವಾದೆ !
ತಡೆಯಬಹುದಿತ್ತು
ಅತ್ತು ಕರೆಯಬಹುದಿತ್ತು
ವಿರೋಧ ವ್ಯಕ್ತ ಪಡಿಸಬಹುದಿತ್ತು
ಆದರೇಕೆ ಬರೀ ನಿಟ್ಟುಸಿರಿನೊಂದಿಗೆ
ನಾ ಮೌನವಾದೆ ?
ಉತ್ತರ ಸಿಗುತಿಲ್ಲ
ಪ್ರಶ್ನೆ ಮರೆಯುತಿಲ್ಲ
ಉತ್ತರ ಸಿಗದ ಈ ಪ್ರಶ್ನೆಯ
ನೆನಪಿನಲಿ
ಪದೇ ಪದೇ ನೆನಪಾಗುತಿದೆ
ನನ್ನ ಆ ದಿನದ ಮೌನ.