ತಣ್ಣನೆಯ ಗಾಳಿಯಲಿ
ತುಂತುರು ಮಳೆ
ಹಕ್ಕಿಗಳ ಚಿಲಿಪಿಲಿ
ಗಾಢವಾದ ರಾತ್ರಿಯೊಂದು
ಕಳೆದು ಹೊಸತೊಂದು
ದಿನದ ಆರಂಭದಲಿ
ಬಾರವಾದ ಮನಸು
ಹಗುರವಾದಂತೆನಿಸಿರಲು
ಬೆಚ್ಚನೆಯ ಸ್ಪರ್ಶವೊಂದು
ಮೈತಾಗಿ ಕಣ್ತೆರೆದರೆ
ಎದುರಿನಲಿ ನೀನು…
ಬೆಚ್ಚಿ ಎದ್ದವಳಾ
ತನ್ನ ಹೆಗಲಾಸರೆ
ನೀಡಿ ಎದೆಗೊರಗಿಸಿಕೊಂಡಿರಲು
ನಿನ್ನೆಯ ಬೇಸರವ ನೆನೆದು
ಕಣ್ಣಂಚಿನಲಿ ಜಾರಿದ ನೀರ
ನೋಡಿ ನಿನ್ನ ಕಣ್ಣಲೂ
ಮೂಡಿದ ನೀರು
ನನ್ನ ಕೆನ್ನೆಯ
ಮೇಲೆ ಜಾರಿ ಬಿದ್ದಿರಲು
ಬಿಕ್ಕಿ ಬಿಕ್ಕಿ ಅತ್ತವಳಾ
ಹಣೆಯ ಮೇಲೊಂದು
ಪ್ರೀತಿಯ ಮುತ್ತನಿತ್ತು
ಕ್ಷಮೆಯಾಚಿಸಿ ಎಲ್ಲಿ
ಮರೆಯಾಗಿ ಹೊದೆಯೊ
ನನ್ನ ನಲ್ಲ.