ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

June 10, 2009

ಪ್ರೀತಿಸಿದವನು ದೂರಾಗಿರಲು (ನೋವು -ದುಃಖ)

Filed under: ಅರಿಯದೇ ಬಂದದ್ದು — kavya gowda @ 10:01 am

ಬದುಕು ಬೇಸರ ,ಜೀವನ ಕಷ್ಟ
ನೋವಾಗಿದ್ದು ಹೃದಯಕ್ಕೆ
ಸಂಕಟವಾಗಿರುವುದು ಮನಸ್ಸಿಗೆ.
ಮಾತು ಮೌನವಾಗಿರುವುದು
ಚಿಂತೆ ಬೇಡದಿರುವುದು
ಯಾತನೆ ಬೇಸರ ಅವನಿಗಿಲ್ಲ
ಅರ್ಥವಿಲ್ಲದೇ ನಾ ಪಡುತಿರುವೆ.
ಪ್ರೀತಿ ಅಮರ ಸತ್ಯ
ಆದರದು ನನಗಲ್ಲ,
ಅವನನ್ನೇ ಪ್ರೀತಿಸಿದ್ದು
ವಿಪರ್ಯಾಸ ಅವನು ಸಿಗದೆ
ಬೇರೆಯವರವಾನಾಗಿದ್ದು.
ಹುಡುಕಾಟ ನನ್ನದು
ಸಿಕ್ಕಿದ್ದು ಅವನಲ್ಲ ,
ಹಣೆಬರಹ ಬ್ರಹ್ಮನದು
ಅದರಲ್ಲಿ ಅವನ ಹೆಸರಿಲ್ಲ
ಹೋದ ಜನುಮದ ಋಣ
ಈ ಜನ್ಮದ ನಮ್ಮಿಬ್ಬರ ಮಿಲನ.
ಅವನಿಗಾಗಿ ನಾನು
ಹೇಳಲಿಲ್ಲ ಅವನೆಂದೂ
ಕಟ್ಟಿಕೊಂಡೆ ಕನಸುಗಳ
ಬಿಟ್ಟು ಹೋಗಿರುವ ನೆನಪುಗಳ
ಮೋಸ ಅವ ಮಾಡಿದ್ದಲ್ಲ
ನಾ ಹೋಗಿದ್ದು.
ಬದುಕುವ ಮನಸಿಲ್ಲ
ಸಾವು ಬರುತಿಲ್ಲ ಸನಿಹ
ಜೀವನ ಸಾಕಾಗಿದೆ
ಅಂತ್ಯ ನನ್ನಲಿಲ್ಲ.
ಮಾಡಿರುವೆನೇನೋ ಪಾಪ
ಪದುತಿರುವುದದಕೆ ಪ್ರಾಯಶ್ಚಿತ
ಕಾಯುತಿರುವೆ ಕೊನೆಯ ಉಸಿರಿಗೆ
ಸಿಗದೆ ಆಗುತಿದೆ ನೋವು ವ್ಯಥೆ.

4 Comments »

  1. Tumba channagi bardidira….

    Hige munduvaresi…. Nimma manasina novugalella horachelli, nalivu mudali nimma manadalli…..

    Inthi…
    Naveen
    http://www.naveenkrhalli.wordpress.com

    Comment by naveenkrhalli — June 10, 2009 @ 11:00 am | Reply

  2. ನಮಸ್ಕಾರ ಕಾವ್ಯ,

    ಸುಂದರವಾಗಿದೆ, ಸಾಲುಗಳು ತುಂಬಾ ಅರ್ಥಗರ್ಭಿತವಾಗಿದ್ದವು…
    ಈ ಸಾಲುಗಳಂತೂ ಸೂಪರ್…
    “ಹುಡುಕಾಟ ನನ್ನದು
    ಸಿಕ್ಕಿದ್ದು ಅವನಲ್ಲ ,
    ಹಣೆಬರಹ ಬ್ರಹ್ಮನದು
    ಅದರಲ್ಲಿ ಅವನ ಹೆಸರಿಲ್ಲ”

    ಚೆನ್ನಾಗಿ ಬರೀತೀರಿ… ಅಭಿನಂದನೆಗಳು..

    ಧನ್ಯವಾದಗಳು,
    -ಗಿರಿ

    Comment by Giri — July 8, 2009 @ 8:55 am | Reply

  3. ಆತ್ಮೀಯ ಕಾವ್ಯ,

    ನಿಮ್ಮ ಈ ವ್ಯಥೆ ಬರಿತವಾದ ಕವನ ನನ್ನ ಹಳೆಯ ನೆನಪುಗಳಿಗೆ ನನ್ನನ್ನು ಕರದೊಯ್ದಿತು ,ನಿಮ್ಮ ಗೆಳೆಯ ಗಿರಿ ಹೇಳಿದ ಹಾಗೆ ನೀವು ಪ್ರಾಸಬದ್ದವಾಗಿ ಬರೆದಿರುವ ಈ ಮೇಲಿನ ೪ ಸಾಲುಗಳು ತು೦ಬಾ ಚೇನ್ನಗಿದೆ. ನಿಮಗಿರುವ ಈ ಕನ್ನಡ ವ್ಯಾಕರಣದ ಮೇಲಿನ ಆಸಕ್ತಿ ಹೀಗೆ ಉಳಿಯಲಿ. ಮು೦ದಿನ ನಿಮ್ಮ ಕಾವ್ಯಗಳಲ್ಲಿ ಜೀವನದ ಉತ್ಸಹ ತು೦ಬಿರಲಿ .

    ಸದಾ ನಿಮ್ಮ ನಗುವನ್ನು ಬಯಸುವ

    ನಿಮ್ಮ ಆತ್ಮೀಯ ಗೆಳೆಯ
    ಶಿವು

    Comment by shiv shankar — July 20, 2009 @ 11:53 am | Reply

    • thuba channagidhe nijvaglu odi kushi aytau life hige allva ?

      Comment by deepa — July 22, 2009 @ 7:23 am | Reply


RSS feed for comments on this post. TrackBack URI

Leave a comment

Blog at WordPress.com.