ಗಡಿಯಾರದ ಮುಳ್ಳುಗಳು
ತಿರುಗುತಿವೆ
ಚಕ್ರದಂತೆ
ಸಮಯಕ್ಕೆ ಇಲ್ಲ
ಕೊನೆಯೆಂಬ ನಿಲ್ದಾಣ.
ಪ್ರಯತ್ನಿಸುತಿರುವೆ
ಕಟ್ಟಿ ಹಾಕಬೇಕೆಂದು
ಈ ದಿನವ
ಜಂಬದಲಿ ಅಡ್ಡ ಬರುತಿಹುದು
ನನ್ನನ್ನೇ ಅಣಕಿಸಿ ನಾಳೆ.
ಏನ ಮಾಡಿದೆ ನಿನ್ನೆ
ಏನ ಮಾಡಲಿ ನಾಳೆ
ಎನ್ನುವುದರಲೇ
ಈ ದಿನವು
ಮುಗಿದು ಬಂದು ನಿಲ್ಲುವುದು
ಮಗದೊಂದು ದಿನವು
ಈ ದಿನಕದು ನಾಳೆಯು.
ಇಂದು ಗಳಿಸುವುದು
ನಾಳೆಗಾಗಿಯಾದರೆ
ನಾಳೆಯಲಿ ಗಳಿಸುವುದು
ಅಂದಿಗಾಗಿ ಅಲ್ಲಾ
ಮಗದೊಂದು ನಾಳೆಗಾಗಿ.
ದಿನದಿನವು ಓಡುತಿರಲು
ತಿರುಗಿ ನೋಡದೇ
ನಿನ್ನೆ ಇಂದನು
ಹಗ್ಗ ಬಿಚ್ಚಿದ ಹುಚ್ಚು
ಕುದುರೆಯ ಹಿಡಿಯುವಂತೆ
ಸಾಧ್ಯವಿಲ್ಲದ ಅಸಾಧ್ಯ
ಕಾಲವನು ಕಟ್ಟಿಹಾಕುವ
ನನ್ನ ಪ್ರಯತ್ನ.
January 3, 2009
ಅಸಾಧ್ಯ ಪ್ರಯತ್ನ
2 Comments »
RSS feed for comments on this post. TrackBack URI
ಕಾಲವನ್ನು ಕಟ್ಟಿಹಾಕುವುದಸಾಧ್ಯ ಕಾವ್ಯ ಅವರೇ, ಅದರ ಜೊತೆಯಲ್ಲಿ ಓಡಬೇಕು!
ಚೆನ್ನಾಗಿದೆ..
Comment by ಪ್ರದೀಪ್ — January 6, 2009 @ 5:00 am |
bea
Comment by Ramya — January 6, 2009 @ 6:26 am |