ನನ್ನ ನಿದ್ರೆಯೆಲ್ಲ
ಅವನಿಗೆ ಮೀಸಲೆಂಬಂತೆ
ನಾ ಕಣ್ಣು ಮುಚ್ಚಿದೊಡನೆಯೇ
ಚೋರನಂತೆ ಬಂದು
ಹಿಂದೆ ಮುಂದೆ
ಸುತ್ತ ಮುತ್ತಾ
ಬಿಡದೆ ತಿರುಗುತಿದ್ದವನಿಗೆ
ಹುಚ್ಚಿವನಿಗೆಂದು ಬೈದರೂ
ಕೇಳದವನಂತೆ ನಟಿಸುತಿದ್ದವ,
ಎದುರು ಬಂದರೆ
ಬಿಟ್ಟ ಕಣ್ಣ ಮುಚ್ಚದೆ
ಇನ್ನೇನು ನನ್ನ
ನುಂಗಿ ಬಿಡುವಂತೆ ನೋಡಿ
ನಾನು ನಾಚಿ
ಕರಗುವಂತೆ ಮಾಡುತಿದ್ದವ,
ಸನಿಹ ಬಂದು
ತೋಳಲಿ ನನ್ನ ಬಳಸಿ
ಹಣೆಗೆ ಮುತ್ತನಿತ್ತು
ಮುದ್ದಿಸಿ ಪ್ರೀತಿಸುತಿದ್ದವ
ನಾ ಕಣ್ಣ ಬಿಟ್ಟವೊಡನೆ
ಬೇಸರಗೊಂಡವನಂತೆ
ಹಗಲಿನಲಿ ನೀ ನನ್ನವಳಲ್ಲ
ಮತ್ತೆ ರಾತ್ರಿ ಬರುವೆನೆಂದು
ಮರೆಯಾಗಿ ಹೋದ
ನನ್ನ ನಲ್ಲ
ನನ್ನ ಕನಸ ರಾಜಕುಮಾರ
December 29, 2008
ನನ್ನ ನಲ್ಲ
8 Comments »
RSS feed for comments on this post. TrackBack URI
Kavya.. once again you have done great work. keep it up..PP(Put Pille)
Comment by Karthik — December 29, 2008 @ 11:43 am |
ನಾ ಕಣ್ಣ ಬಿಟ್ಟವೊಡನೆ
ಬೇಸರಗೊಂಡವನಂತೆ
ಹಗಲಿನಲಿ ನೀ ನನ್ನವಳಲ್ಲ
ಮತ್ತೆ ರಾತ್ರಿ ಬರುವೆನೆಂದು
ಮರೆಯಾಗಿ ಹೋದ
ಚೆನಾಗಿದೆ..
Comment by ರಂಜಿತ್ — December 30, 2008 @ 10:39 am |
ಕವನದ ಮೊದಲ ಮೂರು ಹಂತಗಳ ಪ್ರೀತಿ ಮಾತು ನಾಲ್ಕನೇ ಹಂತದಲ್ಲಿ ಮರೆಯಾಗಿ ಬೇರೆಯದೇ ದಿಕ್ಕಿಗೊಯ್ಯುತ್ತದೆ… ಯಾಕೋ ಕೊನೆಯ ಸಾಲುಗಳು ಮೊದಲಿಗೆ ಸಪೋರ್ಟ್ ಮಾಡ್ಲಿಲ್ಲ ಅನ್ನಿಸ್ತು… ಆದರೂ ಚೆನ್ನಾಗಿದೆ…
Comment by Kallare — December 31, 2008 @ 4:21 am |
kavya nima kavana super
Comment by ranjitha — December 31, 2008 @ 6:01 am |
Tumba chennagi moodi bandide kavya..
Comment by Prasanna — January 1, 2009 @ 5:21 pm |
nice one
Comment by ವಿಜಯರಾಜ್ ಕನ್ನಂತ — January 5, 2009 @ 10:02 am |
ಚೆನ್ನಾಗಿದೆ… ಕಾವ್ಯ, ನಿಮ್ಮ ಕವನ!
Comment by ಪ್ರದೀಪ್ — January 6, 2009 @ 5:04 am |
Kavya, e kanasu thumba chennagide.
Comment by Amrutha Patil — June 22, 2009 @ 6:02 am |