ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

October 14, 2008

ನನ್ನ ಹುಡುಗ

Filed under: ಅರಿಯದೇ ಬಂದದ್ದು — kavya gowda @ 9:31 am

ಮುಂಜಾನೆಯನೆ ಕಾಯುತಿರುವಂತೆ
ಓಡೋಡಿ ಬಂದು
ತಡವಾಗಿದ್ದರೆ  ಅಮ್ಮನಿಗೂ ಕಾಯದೇ
ಪುಸ್ತಕವ ಕೈಚೀಲದಲಿ ತುಂಬಿ
ನನ್ನ ಕೈ ಹಿಡಿದು
ಹಿಂದಿನ ದಿನ ಶಾಲೆಯಲಿ
ಕಲಿಸಿಕೊಟ್ಟ ಪಾಠವನು
ಉರು ಹೊಡೆಯುತ್ತಾ
ದಾರಿಯಲಿ ಹೋಗುವಾಗ
ನಾ ಕಲ್ಲ ಎಡವಿ ಜಾರಿ ಬಿದ್ದರೆ
ತಾನು ಅಯ್ಯೋ ಎನ್ನುತ್ತಾ
ಕಣ್ಣೀರಾ ಒರೆಸಿ ಪ್ರೀತಿಯಲಿ
ಕರೆದೊಯ್ಯುತಿದ್ದ ಜೊತೆಗಾರ
ನನ್ನ ಹುಡುಗ ,

ಗೆಳತಿಯರೊಡನೆ ಕುಂಟೆಬಿಲ್ಲೆ
ಆಡುತಿರುವಾಗ ಹಿಂದಿನಿಂದ
ಬಂದು ಜುಟ್ಟುಎಳೆದು
ಬಿಲ್ಲೆಯನು ಕದ್ದು ಇಟ್ಟು
ಕೊಡದೇ ಸತಾಯಿಸಿ
ಅಳುವಂತೆ ಮಾಡಿ ನಗುತಿದ್ದವ
ನನ್ನ ಕಣ್ಣಲಿ ಕಣ್ಣೀರಾ
ಕಂಡ ಒಡನೆ ದುಃಖ ಪಡುತಿದ್ದ
ನನ್ನ ಗೆಳೆಯ
ನನ್ನ ಹುಡುಗ ,

ಮೈನೆರೆದು ಮೂಲೆಯಲಿ
ಯಾರಿಗೂ ಮುಖ ತೋರದೇ
ನಾಚಿಕೆಯಲಿ  ಕುಳಿತೀರಲು
ಅರಿಶಿನ  ಹಚ್ಚಲು ಬಂದ
ಅಮ್ಮನ  ಸೆರಗಿನ ಹಿಂದಿನಲಿ
ಬಂದು ಯಾರಿಗೂ ಕಾಣದಂತೆ
ಚಿಗುರು ಮೀಸೆಯಡಿಯಲಿ
ನಕ್ಕೂ ಕಣ್ಣು ಹೊಡೆದು
ಓಡಿ ಹೋಗಿದ್ದ ತುಂಟ
ನನ್ನ ಹುಡುಗ,

ಗೆಳೆಯರೆಂಬ ಸಲುಗೆಯಲಿ
ಮನೆಯಲ್ಲಿ ಅನುಮಾನವಿಲ್ಲದಿರಲು
ಹುಚ್ಚುಖೊಡಿ ಮನಸ್ಸು
ಕನ್ನಡಿ ಮುಂದೋದಿಷ್ಟು
ನನ್ನ ನಾ ನೋಡಿ
ಸೀರೆ ಸೆರಗ ಸರಿ ಮಾಡುತಿರಲು
ಕನ್ನಡಿ ಒಳಗಿಂದ ನನ್ನ
ಸೌಂದರ್ಯ ಕದ್ದು ನೋಡಿ
ನನ್ನ ಮನಸ ಕೆಡಿಸಿ
ಪ್ರೀತಿಸುವಂತೆ ಮಾಡಿದ್ದ ನಲ್ಲ
ನನ್ನ ಹುಡುಗ,

ಯಾರು ಇಲ್ಲದಿರಲು
ಕಳ್ಳ ಬೆಕ್ಕಿನಂತೆ ಕದ್ದು ಬಂದು
ಅಪ್ಪಿಕೊಂಡರೆ, ಬೆದರಿ
ಕಿರು ಹೊರಟಾಗ
ತುಟಿಗೆ ತುಟಿಯನಿಟ್ಟು
ಉಸಿರುಕಟ್ಟುವಂತೆ ಮುತ್ತನಿತ್ತು
ಮನಸಿನಲಿ ಬಾವನೆಗಳ
ಅಲೆಗಳನು ಮೂಡಿಸಿದ್ದ
ನನ್ನ ಹುಡುಗ,

ನನಗೆ ತಿಳಿಯದ
ನನ್ನ ಮದುವೆಯ ಮಾತು
ಅವನ ಕಿವಿಗೆ ಬಿದ್ದವೊಡನೇ
ಬಾಲ್ಯದ ಸ್ನೇಹವ
ಮನಸ್ಸಿನ ಪ್ರೀತಿಯ
ಮೌನವಾಗಿ ಮರೆತು
ಕಣ್ಣಿಗೆ ಕಾಣದಂತೆ
ಮರೆಯಾಗಿ ಹೋಗಿದ್ದ

ನನ್ನ ಹುಡುಗ(?)….

5 Comments »

  1. ಕೊನೆಯವರೆಗೂ ಅದ್ಭುತವಾಗಿ ಓದಿಸಿಕೊಂಡು ಹೋಯಿತು ಕವನ..ಕೊನೆಯಲ್ಲಿ ಮಾತ್ರ ಯಾಕೊ ಸ್ವಲ್ಪ ಬೇಜಾರಾಯ್ತು..ನಿಮ್ ಹುಡುಗ ಎಲ್ಲೋ ಹೋಗಿದ್ದಕ್ಕೆ..ಬಾಲ್ಯದಿಂದ ಯವ್ವನದವರೆಗೂ ಹೇಳಿರುವ ಎಲ್ಲ ವಿಷಯಗಳು ಸೂಪರ್..

    ಚನ್ನಾಗಿ ಬರಿತೀಯ..ಆದ್ರೆ ನಿನಗೆ ಸೋಮಾರಿತನ…ಹೇಳಿದ್ರೆ ಸಕತ್ ಬ್ಯುಸಿನೋ ಅಂತಿ..ವಾರಕ್ಕೆ ಒಂದಾದ್ರು ಇಂತ ಕವನ ಬರಲಿ…ಕವನ ಕತೆ ಬಿಟ್ಟು ಕೂಡ ಬೇರೆ ಎನಾದು ಬರಿಲಿಕ್ಕೆ ಅಗುತ್ತ ಯೋಚಿಸು(ಕ್ಷಮಿಸು ನನಗೆ ಕವನ ಬಿಟ್ಟು ಬೇರೆ ಏನೂ ಬರೋದಿಲ್ಲ) ..ನಿನಗೆ ಇಲ್ಲಿ ಒಂದು ಬ್ಲಾಗ್ ವಿಳಾಸ ಕೊಡ್ತೀನಿ ಅದನ್ನ ಓಮ್ದು ಸಲ ಓದು…

    http://www.dharwadpallavi.blogspot.com/ .. ನೋಡು ಒಂದು ಸಮ ಬಿಡುವಿದ್ದಾಗ… ಈ ವಿಷ್ಯ ನಿನಗೆ ಯಾಕೆ ಹೇಳ್ತಿದ್ದೀನಿ ಅಂದ್ರೆ ಕತೆ ಕವಿತೆ ಬಿಟ್ಟು ಕೂಡ ಬೇರೆ ಬರಿಬಹುದು..ನಿನ್ಅಗೆ ಭಾಷೆಯ ಮೇಲೆ ಹಿಡೀತವಿದೆ..ಅದಕ್ಕೇ ಹೇಳಿದ್ದು..

    ಮತ್ತೆ ಸೋಮಾರಿತನ ಮಾಡಬೇಡ..
    ನಿಮ್ ಪ್ರೆಂಡು
    ಸೋಮ

    Comment by ನವಿಲಗರಿ — October 18, 2008 @ 12:48 pm | Reply

  2. ಚೆನ್ನಾಗಿದೆ. ಸರಳ ಸಾಹಿತ್ಯ. ಮುದ್ದು ಪದಗಳು.

    Comment by skhalana — October 22, 2008 @ 4:44 pm | Reply

  3. ಚೆನ್ನಾಗಿದೆ…

    Comment by ಪ್ರದೀಪ್ — November 10, 2008 @ 10:44 am | Reply

  4. Haagaadre ಮತ್ತೆ ಸೋಮಾರಿತನ ಬೇಡ….

    Comment by kallare — November 11, 2008 @ 7:15 am | Reply

  5. kone sariyiddiddare olleya muda sigta ittu annistu..:-)
    aadaru olleya prayatna…

    Comment by ranjith — November 12, 2008 @ 7:28 am | Reply


RSS feed for comments on this post. TrackBack URI

Leave a comment

Blog at WordPress.com.